ನವದೆಹಲಿ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ 9 ದೇಶಗಳಲ್ಲಿ ಒಟ್ಟು 10 ಒನ್​ ಸ್ಟೆಪ್​​ ಸೆಂಟರ್​​ಗಳನ್ನು ತೆರೆಯಲು ಮುಂದಾಗಿದೆ. ಬಹ್ರೇನ್, ಯುಎಇ, ಓಮನ್, ಕತಾರ್, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪೂರ್, ಕುವೈತ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಈ ಒನ್​ಸ್ಟೆಪ್ ಸೆಂಟರ್​​ಗಳು ತಲೆ ಎತ್ತಲಿವೆ.

ಈ ಒನ್​ ಸ್ಟೆಪ್ ಸೆಂಟರ್​​ಗಳಲ್ಲಿ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವವರ ನೆರವಿಗೆ ಕೇಂದ್ರ ಸರ್ಕಾರಗಳು ನಿಲ್ಲಲಿವೆ. ಆಯಾ ದೇಶಗಳ ಕೇಂದ್ರ ಸರ್ಕಾರಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಬೆಂಬಲ ಪಡೆದು ಈ ಕೇಂದ್ರಗಳನ್ನು ನಡೆಸಲಿವೆ ಎನ್ನಲಾಗಿದೆ.

ಏನಿದು ಒನ್​ ಸ್ಟೆಪ್ ಸೆಂಟರ್..?
ಖಾಸಗಿ ಅಥವಾ ಸಾರ್ವಜನಿಕ ಪ್ರದೇಶ, ಕುಟುಂಬ, ಸಮುದಾಯ ಅಥವಾ ಕೆಲಸ ನಿರ್ವಹಿಸುವ ಪ್ರದೇಶದಲ್ಲಿ ಹಿಂಸೆಗೊಳಗಾದ ಮಹಿಳೆಯರು, ದೈಹಿಕ, ಲೈಂಗಿಕ, ಮಾನಸಿಕ ಅಥವಾ ಆರ್ಥಿಕ ಬೆದರಿಕೆ, ವಯಸ್ಸು, ಜಾತಿ, ಶೈಕ್ಷಣಿಕ, ವೈವಾಹಿಕ ಸ್ಥಿತಿ, ಬಣ್ಣ, ಸಂಸ್ಕೃತಿಯ ಹೆಸರಿನಲ್ಲಿ ಬೆದರಿಕೆಗೊಳಗಾದ ಮಹಿಳೆಯರು, ಲೈಂಗಿಕ ಬೆದರಿಕೆ, ಹಲ್ಲೆ, ಕೌಟುಂಬಿಕ ಕಲಹ, ಮಾನವ ಕಳ್ಳಸಾಗಣೆ, ಆ್ಯಸಿಡ್ ಅಟ್ಯಾಕ್​ ನಂಥ ದೌರ್ಜನ್ಯಕ್ಕೊಳಗಾದ ಮಹಿಳೆಯರು ರಕ್ಷಣೆಗಾಗಿ ಈ ಒನ್​ ಸ್ಟೆಪ್ ಸೆಂಟರ್​ಗಳ ಮೊರೆ ಹೋಗಬಹುದಾಗಿದೆ. ಈ ಸೆಂಟರ್​ಗಳಲ್ಲಿ ಅಸಹಾಯಕರಾದ ಮಹಿಳೆಯರಿಗೆ ನೆರವು ಒದಗಿಸಲಾಗುತ್ತದೆ.

The post ಮಹಿಳೆಯರ ರಕ್ಷಣೆಗೆ ಕೇಂದ್ರ ಮೆಗಾ ಪ್ಲಾನ್.. 9 ದೇಶಗಳಲ್ಲಿ ತಲೆ ಎತ್ತಲಿವೆ ‘ಒನ್​ ಸ್ಟೆಪ್​ ಸೆಂಟರ್’ appeared first on News First Kannada.

Source: newsfirstlive.com

Source link