ಮಹಿಳೆಯ ಕೊರಳಿನಿಂದ ಸರ ಕದ್ದು ಪರಾರಿಯಾಗುತ್ತಿದ್ದವನನ್ನು ಬೆನ್ನಟ್ಟಿ ಹಿಡಿದ ಆಟೋ ಚಾಲಕ

ಬೆಂಗಳೂರು: ನಗರದಲ್ಲಿ ಸರಗಳ್ಳತನ ಮಾಡ್ತಿದ್ದ ಆರೋಪಿಯನ್ನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದವನನ್ನ ಆಟೋ ಚಾಲಕರೊಬ್ಬರು ಹಿಡಿದಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೇಶವ (24) ಬಂಧಿತ ಆರೋಪಿಯಾಗಿದ್ದು, ಆಟೋ ಚಾಲಕ ರುದ್ರೇಶ್ ಸಹಾಯದಿಂದ ಆರೋಪಿಯನ್ನ ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯಿಂದ 40 ಸಾವಿರ ಮೌಲ್ಯದ 9.5ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಸರಗಳ್ಳತನದ ವೇಳೆ ಆರೋಪಿಯನ್ನ ಹಿಡಿದುಕೊಟ್ಟ ಆಟೋ ಚಾಲಕ ರುದ್ರೇಶ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ಸೂಕ್ತ ಬಹುಮಾನ‌ ನೀಡೋಕೆ ಕಮಲ್‌ ಪಂತ್‌ ಸೂಚಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *