ಬೆಂಗಳೂರು: ಕೆಆರ್​ಎಸ್​ ಡ್ಯಾಂ ರಕ್ಷಣೆ ಕುರಿತಂತೆ ಡ್ಯಾಂ ಬಾಗಿಲಿಗೆ ಸುಮಲತಾರನ್ನೇ ಮಲಗಿಸಿ ಅಂತ  ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಕ್ಕೆ.. ಮಂಡ್ಯ ಸಂಸದೆ ಸುಮಲತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡೋ ವೇಳೆ ಮಾಜಿ ಮುಖ್ಯಮಂತ್ರಿಗೆ ಜ್ಞಾನ ಇಲ್ವಾ ಎಂದು ಮಂಡ್ಯದ ಸೊಸೆ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, ಸರ್ಕಾರ ಮೈಶುಗರ್ ಕಾರ್ಖಾನೆ ಆರಂಭ ಮಾಡಿ ಸರ್ಕಾರವೇ ನಡೆಸಿದರೆ ನನಗೆ ಯಾವುದೇ ವಿರೋಧವಿಲ್ಲ. ಅದನ್ನು ಯಾವ ರೀತಿ ಆರಂಭ ಮಾಡಬೇಕು ಎಂಬುವುದನ್ನು ಮುಖ್ಯಮಂತ್ರಿಗಳೇ ತೀರ್ಮಾನ ಕೈಗೊಳ್ಳಬೇಕು. ನಾನು ಈಗಾಗಲೇ ಸಿಎಂ, ಸಕ್ಕರೆ ಸಚಿವರು, ಅಧಿಕಾರಿಗಳನ್ನು ನಿರಂತರವಾಗಿ ಮಾತನಾಡಿದ್ದು, ಅವರಿಗೆ ಕಾರ್ಖಾನೆ ಆರಂಭ ಮಾಡಿದರೆ ಸಾಕು ಎಂಬುವುದು ನನ್ನ ಉದ್ದೇಶ ಎಂದರು.

ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಮಾತಿನ ಮೇಲೆ ಹಿಡಿತವೇ ಇಲ್ಲದಿದ್ದರೇ ಹೇಗೆ? ಸಂಸದೆ ಎಂಬುವುದನ್ನು ಬಿಟ್ಟರೂ ಮಹಿಳೆಯ ಬಗ್ಗೆ ಗೌರವದಿಂದ ಮಾತನಾಡುವುದು ಬಾರದಿದ್ದರೇ ಹೇಗೆ? ಅವರು ಏನೇ ಹೇಳಿಕೆ ಕೊಟ್ಟರೂ ನನಗೆ ಬೇಜಾರಾಗೋದಿಲ್ಲ. ಇದನ್ನು ಚುನಾವಣೆಯ ಸಂದರ್ಭದಲ್ಲಿ ನೋಡಿದ್ದೀರಿ.

ಇದನ್ನೂ ಓದಿ: ಸಿಎಂ ಬಿಎಸ್​ವೈ -ಮಾಜಿ ಸಿಎಂ ಹೆಚ್​ಡಿಕೆ ಚರ್ಚೆ..ಕೂತೂಹಲ ಮೂಡಿಸಿರುವ ಭೇಟಿ

ಮೊದಲ ಸಂಸತ್ ಅಧಿವೇಶನ ಸಂದರ್ಭದಲ್ಲೇ ನಾನು ಗಣಿಗಾರಿಕೆ ಬಗ್ಗೆ ಸಂಸತ್​ನಲ್ಲೇ ಮಾತನಾಡಿದ್ದೇನೆ. ಕೆಆರ್​ಎಸ್ ಜಲಾಶಯದ ರಕ್ಷಣೆ ಬಗ್ಗೆ ಜಾಗೃತಿ ವಹಿಸುವುದು ನಮ್ಮ ಕಾಳಜಿ. ಈ ಬಗ್ಗೆ ಗಣಿ ಸಚಿವರನ್ನು ಕರೆದುಕೊಂಡು ಹೋಗಿ ಅಕ್ರಮ ಗಣಿಗಾರಿಕೆ ಬಗ್ಗೆ 100 ಕೋಟಿ ರೂಪಾಯಿ ದಂಡ ಹಾಕಿಸಿದ್ದೇವೆ. ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಂಡರೇ ಸಾವಿರಾರರು ಕೋಟಿ ರೂಪಾಯಿ ಹಣ ಸರ್ಕಾರಕ್ಕೆ ಬರುತ್ತದೆ. ನಾನು ಯಾರನ್ನು ವೈಯುಕ್ತಿಕವಾಗಿ ಆರೋಪ ಮಾಡಿಲ್ಲ. ಈ ಬಗ್ಗೆ ನಾನು ಏನೂ ಕಮೆಂಟ್ ಮಾಡೋದಿಲ್ಲ ಎಂದರು.

ಅವರ ಮಾತುಗಳಿಂದ ಅವರ ಸಂಸ್ಕಾರ ಏನು ಎಂಬುವುದು ತೋರುತ್ತಿದೆ. ಅದನ್ನು ಅವರೇ ತೋರಿಸಿಕೊಳ್ಳುತ್ತಿದ್ದರೇ ಬಿಡಿ ಎಂದರು. ದೊಡ್ಡ ಹಗರಣದ ಬಗ್ಗೆ ಗೊತ್ತಿದ್ದರೂ ಸುಮ್ಮನೆ ಇದ್ದವರೂ ಕೆಆರ್​ಎಸ್​ ವಿಚಾರ ಬಂದ ಕೂಡಲೇ ಈ ರೀತಿ ಮಾತನಾಡುತ್ತಾರೆ ಎಂದರೇ ಇದರ ಅರ್ಥ ಏನೂ? ಮಂಡ್ಯದಲ್ಲಿ ಏನೂ ನಡೆಯುತ್ತಿದೆ ಎಂಬುವುದು ಓಪನ್ ಸೀಕ್ರೆಟ್​.. ತನಿಖೆಯ ವರದಿ ಬರಲಿ ಎಂದು MUDA ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

 

The post ಮಹಿಳೆ ಬಗ್ಗೆ ಇಂಥಾ ಹೇಳಿಕೆ.. ಮಾಜಿ ಸಿಎಂಗೆ ಜ್ಞಾನ ಇಲ್ವಾ.? HDK ವಿರುದ್ಧ ಮಂಡ್ಯ ಸೊಸೆ ಕೆಂಡ appeared first on News First Kannada.

Source: newsfirstlive.com

Source link