ನೀವು ಹೊಸ ಕಾರು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಿರಾ? ನಿವು ಹೊಸ ಕಾರುಗಳು ಮೇಲಿರುವ ಆಫರ್‍ ಗಳನ್ನು ಎದುರು ನೋಡುತ್ತಿದ್ದಿರಾ? ಹಾಗಾದರೆ ತಡವೇಕೆ ? ಜನಪ್ರಿಯ ಕಾರುಗಳ ಉತ್ಪಾದಕ ಕಂಪನಿ ಮಹೀಂದ್ರಾ ತನ್ನ ಕಾರುಗಳ ಮೇಲೆ ಬಂಪರ್ ರಿಯಾಯಿತಿಯ ಆಫರ್ ಗಳನ್ನು ಘೋಷಿಸಿದೆ.

ಮಹೀಂದ್ರಾ ಕಂಪೆನಿ ಬಿಎಸ್6 ಕಂಪ್ಲೈಂಟ್ ಕಾರುಗಳಲ್ಲಿ ಕೆಲವು ಲಾಭದಾಯಕ ಆಫರ್ ಘೋಷಿಸಿದೆ. ಅಧಿಕೃತ ವೆಬ್​ಸೈಟ್​ನಲ್ಲಿ ಗ್ರಾಹಕರಿಗೆ 3.06 ಲಕ್ಷದವರೆಗೆ ರಿಯಾಯಿತಿಯನ್ನು ನೀಡಿದೆ. ಕೆಯುವಿ100 ನೆಕ್ಸ್ಟ್​​ನಿಂದ ಆಲ್ತುರಾಸ್ ಜಿ4 ಪ್ರಮುಖ ಎಸ್​ಯುವಿವರೆಗಿನ ಕಾರುಗಳ ಮೇಲೆ ನಗದು ಕೊಡುಗೆಯನ್ನು ನೀಡಿದೆ. ಜೊತೆಗೆ ಎಕ್ಸ್​​ಚೇಂಜ್- ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ಪಡೆಯುವ ಅವಕಾಶ ಒದಗಿಸಿದೆ.

ಈ ಸುವರ್ಣಾವಕಾಶ ಇದೇ ತಿಂಗಳು (ಏಪ್ರಿಲ್) 30 ರ ವರೆಗೆ ಮಾತ್ರ ಲಭ್ಯ ಇರಲಿದೆ.  ಮಹೀಂದ್ರಾ ಕೆಯುವಿ 100 ಎನ್ ಎಕ್ಸ್​ ಟಿಯನ್ನು ಅಧಿಕೃತ ವೆಬ್​ಸೈಟ್​ನಲ್ಲಿ ಪಟ್ಟಿ ಮಾಡಿದೆ, ಅದರಲ್ಲಿ ಗರಿಷ್ಠ ಅನುಕೂಲ 62,055ವರೆಗಿನ ಲಾಭಗಳನ್ನು ಹೊಂದಿದೆ. ಗ್ರಾಹಕರಿಗೆ ಇದರಿಂದಾಗಿ 38,055 ರೂ ವರೆಗಿನ ಲಾಭ, 20 ಸಾವಿರ ವರೆಗಿನ ಬೋನಸ್ ಜೊತೆಗೆ 4 ಸಾವಿರ ರೂ ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಈ ವಿನಾಯಿತಿಯ ಆಫರ್ ಗಳು ಥಾರ್ ಹಾಗೂ TUV300 ಕಾರುಗಳಿಗೆ ಅನ್ವಯಿಸುವುದಿಲ್ಲ.

ಯಾವ ಕಾರುಗಳಿಗೆ ಅಪ್ಲೈ ?

Mahindra KUV100 NXT, XUV300, XUV500, Scorpio, Marazzo, Bolero and the flagship Alturas G4 ಕಾರುಗಳಿಗೆ ಈ ಬಂಪರ್ ಆಫರ್ ಅನ್ವಯವಾಗಲಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Leave a comment