ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂದೆ- ತಾಯಿಗೆ ಕೋವಿಡ್ -19 ಸೋಂಕು ದೃಢವಾಗಿದೆ.

ಎಂ.ಎಸ್.ಧೋನಿ ತಾಯಿ ದೇವಕಿ ದೇವಿ ಮತ್ತು ತಂದೆ ಪಾನ್ ಸಿಂಗ್ ಅವರಿಗೆ ಸೋಂಕು ದೃಢವಾದ ಕಾರಣ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಯಾರಿಂದಲೂ ತಾನು “ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ’ : ಧೋನಿ

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ಮುಂಬೈನಲ್ಲಿದ್ದಾರೆ. ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಿಎಸ್ ಕೆ ಪಂದ್ಯವಾಡಲಿದೆ.

ದುಬೈನಲ್ಲಿ ನಡೆದ ಕಳೆದ ಸೀಸನ್ ನ ಐಪಿಎಲ್ ಬಳಿಕ ಧೋನಿ ಕುಟುಂಬದೊಂದಿಗೆ ಕಾಲ ಕಳೆದಿದ್ದರು. ಕಳೆದ ಮಾರ್ಚ್ ನಲ್ಲಿ ಚೆನ್ನೈಗೆ ಬಂದು ಸಿಎಸ್ ಕೆ ಕ್ಯಾಂಪ್ ಸೇರಿದ್ದರು.

ಇದನ್ನೂ ಓದಿ: ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

ಕ್ರೀಡೆ – Udayavani – ಉದಯವಾಣಿ
Read More