ಮೈಸೂರು: ಕೊರೊನಾ ಬಂದ್ಮೇಲೆ ಮಾನವೀಯತೆ ಮರೆತುಹೋಗಿದೆ. ಮನುಷ್ಯತ್ವ ಸತ್ತು ಹೋಗಿದೆ. ಹಣ ಕೊಟ್ರಷ್ಟೇ ಮೃತದೇಹ ಕೊಡ್ತೀವಿ ಅನ್ನೋ ಪರಿಸ್ಥಿತಿ ಈಗ ಆಸ್ಪತ್ರೆಗಳಲ್ಲಿ ಕಂಡು ಬರ್ತಿದೆ. ತಮ್ಮವರ ಕಳೆದು ಕೊಂಡ ನೋವಿನಲ್ಲಿರೋರಿಗೆ ಗಾಯದ ಮೇಲೆ ಬರೆ ಎಳೆಯುತ್ತಿವೆ ಆಸ್ಪತ್ರೆಯ ಲಕ್ಷ ಲಕ್ಷ ಬಿಲ್​ಗಳು. ತನ್ನ ಸರ್ವಸ್ವವೂ ಆದ ಪತಿಯನ್ನ ಕಳ್ಕೊಂಡು ಮಗಳನ್ನ ತಬ್ಬಿಕೊಂಡು ಅಳುತ್ತಿರುವ ಮಹಿಳೆಯನ್ನು ಖಾಸಗಿ ಆಸ್ಪತ್ರೆ ಕಾಡಿದೆ.

ಕಳೆದ 15 ದಿನದ ಹಿಂದೆ ಈ ಕುಟುಂಬದ ಬಸವರಾಜು ಎಂಬುವವರಲ್ಲಿ ಕೊರೊನಾ ಸೋಂಕಿರೋದು ಪತ್ತೆಯಾಗಿತ್ತು. ಹೀಗಾಗಿ ಅವರನ್ನ ಗೌತಮ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆರೋಗ್ಯ ಗಂಭೀರವಾಗಿ ಬಸವರಾಜು ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿರಲಿಲ್ಲವಂತೆ. ಆಗಿರೋ ಬಿಲ್​ ಸಂಪೂರ್ಣವಾಗಿ ಕಟ್ಟಿದ್ರಷ್ಟೇ ಬಾಡಿ ಕೊಡೋದು ಅಂತ ಪಟ್ಟು ಹಿಡಿದು ಕೂತುಬಿಟ್ಟಿದ್ರು. ಅದಕ್ಕೆ ಈ ಮಹಿಳೆ ತನ್ನ ಮಾಂಗಲ್ಯವನ್ನ ಮಾರಾಟ ಮಾಡಿ 90 ಸಾವಿರ ಬಿಲ್​ ಪಾವತಿಸಿದ್ದಾರೆ ಎನ್ನಲಾಗಿದೆ.

90 ಸಾವಿರ ಹಣ ಕಟ್ಟಿದ್ರು ಶವ ನೀಡದೇ ಆಸ್ಪತ್ರೆ ಸಿಬ್ಬಂದಿ ತಕರಾರು ತೆಗೆದಿದ್ರು, ಕೂಡಲೇ ಮಹಿಳೆಯ ನೆರವಿಗೆ ಬಂದಿದ್ದು ಜಂಗಲ್ ಲಾಡ್ಜ್ ಅಧ್ಯಕ್ಷ ಅಪ್ಪಣ್ಣ ಅವರು, ಆಸ್ಪತ್ರೆ ಬಳಿ ಬಂದು ಅಧಿಕಾರಿಗಳೊಂದಿಗೆ ಮಾತನಾಡಿ ಬಸವರಾಜುರ ಮೃತದೇಹವನ್ನ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸದ್ಯ ಬಸವರಾಜು ಮೃತದೇಹವನ್ನ ಪಡೆದ ಕುಟುಂಬ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

The post ‘ಮಾಂಗಲ್ಯ ಮಾರಿ ಹಣ ಕೊಟ್ರು ಹಣ ಮೃತದೇಹ ಕೊಡಲಿಲ್ಲ’ appeared first on News First Kannada.

Source: newsfirstlive.com

Source link