ಸಿಎಂ ಬಸವರಾಜ ಬೊಮ್ಮಾಯಿ ಹತ್ಯೆಯಾದ ಪ್ರವೀಣ್ ಮನೆಗೆ ನಿನ್ನೆ ಭೇಟಿ ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದರು. 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.

ಮೃತ ಪ್ರವೀಣ್ ನೆಟ್ಟಾರು,
ಸಹೋದರ ರಂಜಿತ್
ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಮಾಂಸದ ಉದ್ಯಮ ಶುರು ಮಾಡಿದ್ದೇ ಪ್ರವೀಣ್ ಹತ್ಯೆಗೆ ಕಾರಣವಾಯ್ತಾ? ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಈ ಕುರಿತಾಗಿ ಪ್ರವೀಣ್ ಸಹೋದರ ರಂಜಿತ್ ಸ್ಫೋಟಕ ಹೇಳಿಕೆ ನೀಡಿದ್ದು, ಮಾಂಸ ಉದ್ಯಮದಲ್ಲಿ ಹಿಂದುಗಳು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದ. ಮೀನಿನ ಟೆಂಡರ್ ಹಿಂದುಗಳಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹಿಂದೂವಿನಲ್ಲಿ ಪ್ರಮುಖ ನಾಯಕನಾಗಿ ರೂಪುಗೊಳುತ್ತಿದ್ದ. ಅಲ್ಲದೇ ಒಂದು ತಿಂಗಳಿಂದ ಪ್ರವೀಣ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಮೌಖಿಕವಾಗಿ ಬೆಳ್ಳಾರೆ ಪೊಲೀಸರಿಗೂ ವಿಚಾರ ತಿಳಿಸಲಾಗಿದೆ. ಆದರೆ ಪೊಲೀಸರು ಗಂಭೀರವಾಗಿ ಇದನ್ನು ಪರಿಗಣಿಸಿಲ್ಲ ಎಂದು ಟಿವಿ9ಗೆ ಪ್ರವೀಣ್ ಸಹೋದರ ರಂಜಿತ್ ಹೇಳಿಕೆ ನೀಡಿದರು.