ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಸಂಬಂಧ ಆರೋಪಿ ಪೀಟರ್​ನ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಹಾಡಹಗಲೇ, ದುಷ್ಕರ್ಮಿಗಳು, ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್​​​ನಲ್ಲಿ ರೇಖಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಕೂಡಲೇ ರೇಖಾರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ  ಸಾವನ್ನಪ್ಪಿದ್ದಾರೆ.

ಅಂದ್ಹಾಗೆ ರೇಖಾ ಅವರ ಬಾಡಿಗಾರ್ಡ್​​​​ ಆಗಿದ್ದ ಪೀಟರ್ ಈ ಕೃತ್ಯ ನಡೆಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಇಂದು ರೇಖಾ ಫುಡ್ ಕಿಟ್ ಹಂಚಲು ಬಿಜೆಪಿ ವಾರ್ಡ್​ ಕಚೇರಿಗೆ ಬಂದಿದ್ದ ವೇಳೆ ಜೊತೆಗೇ ಇದ್ದ ಪೀಟರ್ ಮತ್ತು ಸಹಚರರಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಮೊದಲೇ ಪ್ಲಾನ್ ಮಾಡಿದ್ದ ಆರೋಪಿಗಳು ಏರಿಯಾದ ಒಟ್ಟು 7 ಸಿಸಿ ಕ್ಯಾಮರಗಳನ್ನ ತಿರುಚಿ,  ಕೊಲೆಗೈದಿದ್ದಾರೆ. ಪೀಟರ್ ಹಾಗೂ ಮತ್ತೋರ್ವ ಆರೋಪಿ ಸ್ಪೀಫನ್ ರೇಖಾ ಪತಿ ಕದೀರೇಶ್ ಕೊಲೆಯಲ್ಲಿ ಆರೋಪಿಗಳಾಗಿದ್ರು. ಸ್ಟೀಫನ್ ಕದಿರೇಶನ ತಂಗಿಯ ಗಂಡ. ಎರಡು ತಿಂಗಳ ಹಿಂದಷ್ಟೇ ಜುಲೈನಿಂದ‌ ಬಂದಿದ್ದ.

ಕೊಲೆ ಹಿಂದೆ ಪೀಟರ್​ ಕೈವಾಡವಿರೋ ಶಂಕೆ ದಟ್ಟವಾಗಿದೆ. ಈ ಹಿನ್ನೆಲೆ ಪೊಲೀಸರು ಪೀಟರ್​ನ ತಾಯಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

The post ಮಾಜಿ ಕಾರ್ಪೊರೇಟರ್ ರೇಖಾ ಕೊಲೆ: ಆರೋಪಿ ಪೀಟರ್​ನ ತಾಯಿಯನ್ನ ವಶಕ್ಕೆ ಪಡೆದ ಪೊಲೀಸ್ appeared first on News First Kannada.

Source: newsfirstlive.com

Source link