ನವದೆಹಲಿ: ಕೋವಿಡ್ 19​ ಸೋಂಕಿಗೆ ಒಳಗಾಗಿದ್ದ ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ದಳ(RLD) ಮುಖ್ಯಸ್ಥ ಚೌಧರಿ ಅಜಿತ್ ಸಿಂಗ್ ಇಂದು ವಿಧಿವಶರಾಗಿದ್ದಾರೆ. ಈ ಬಗ್ಗೆ ಅಜಿತ್​ ಸಿಂಗ್​ರವರ ಪುತ್ರ ಜಯಂತ್​ ಚೌಧರಿ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

82 ವರ್ಷದ ಅಜಿತ್ ಸಿಂಗ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ಮತ್ತು ರಾಷ್ಟ್ರೀಯ ಲೋಕ ದಳದ ಸ್ಥಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ರು. ಕೊರೊನಾ ಸೋಂಕಿಗೀಡಾಗಿದ್ದ ಕಾರಣ ಅಜಿತ್ ಸಿಂಗ್ ಅವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್​ 20ನೇ ತಾರಿಖಿನಂದು ಅವ್ರಿಗೆ ಕೊರೊನಾ ದೃಢಪಟ್ಟಿತ್ತು ಶ್ವಾಸಕೋಶದ ಸಮಸ್ಯೆಯಿಂದ ಮಂಗಳವಾರ ರಾತ್ರಿ ಅವರ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರರಾದ ಚೌಧರಿ ಅಜಿತ್ ಸಿಂಗ್ 7 ಬಾರಿ ಸಂಸದರಾಗಿದ್ದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಸಂಪುಟದಲ್ಲಿ ಅಜಿತ್ ಸಿಂಗ್ ನಾಗರಿಕ ವಿಮಾನಯಾನ ಸಚಿವರಾಗಿ ಕೆಲಸ ಮಾಡಿದ್ದಾರೆ.

ಚೌಧರಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಜಿತ್ ಸಿಂಗ್ ಅವರ ನಿಧನದ ಸುದ್ದಿಯಿಂದ ಬೇಸರಗೊಂಡಿದ್ದೇನೆ. ಅವರು ಯಾವಾಗಲೂ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದರು. ಜನಪ್ರತಿನಿಧಿಯಾಗಿ ಮತ್ತು ಸಚಿವರಾಗಿ ಅವರು ದೇಶದ ರಾಜಕೀಯದಲ್ಲಿ ಛಾಪು ಮೂಡಿಸಿದ್ದಾರೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪ ಎಂದು ರಾಷ್ಟ್ರಪತಿ ಕೋವಿಂದ್​ ಟ್ವೀಟ್​ ಮಾಡಿದ್ದಾರೆ.

ಚೌಧರಿ ಅಜಿತ್ ಸಿಂಗ್ ಅವರ ನಿಧನ ಅತ್ಯಂತ ನೋವಿನ ಸಂಗತಿಯಾಗಿದೆ. ಅವರು ಯಾವಾಗಲೂ ರೈತರ ಹಿತಾಸಕ್ತಿಗಳಿಗೆ ಹೆಚ್ಚು ಸಮಯ ಮೀಸಲಿಟ್ಟಿದ್ದರು. ಕೇಂದ್ರದಲ್ಲಿ ಹಲವಾರು ಇಲಾಖೆಗಳ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಕುಟುಂಬಸ್ಥರು, ಬೆಂಬಲಿಗರಿಗೆ ಈ ನೋವು ಭರಿಸಲು ದೇವರು ಶಕ್ತಿ ನೀಡಲಿ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

The post ಮಾಜಿ ಕೇಂದ್ರ ಸಚಿವ, RLD ಮುಖ್ಯಸ್ಥ ಚೌಧರಿ ಅಜಿತ್​ ಸಿಂಗ್ ಕೊರೊನಾದಿಂದ ನಿಧನ appeared first on News First Kannada.

Source: newsfirstlive.com

Source link