ಇಂಗ್ಲೆಂಡ್​ ಟೆಸ್ಟ್ ಸರಣಿ ಸನಿಹದಲ್ಲಿದೆ. ಗಿಲ್​ ಗಾಯಕ್ಕೆ ತುತ್ತಾಗಿದ್ದು ಕೊಹ್ಲಿ ಪಡೆಯ ಆಘಾತಕ್ಕೆ ಕಾರಣವಾದ್ರೆ, ಹಲವರಲ್ಲಿ ಅನುಮಾನ ಮೂಡಿಸಿತ್ತು. ಇಂಜುರಿಯಾದ್ರೂ ಶುಭ್​ಮನ್​ ಗಿಲ್ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಣಕ್ಕಿಳಿದಿದ್ದು ಯಾಕೆ..? ಗಿಲ್​ ತಮಗಾದ ಗಾಯವನ್ನ ಬಚ್ಚಿಟ್ರಾ..? ಮಾಜಿ ಕ್ರಿಕೆಟಿಗ ಗಿಲ್ ಇಂಜುರಿ ಬಗ್ಗೆ ಹೇಳಿದ್ದೇನು..?

ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್​​ ಸೋಲಿನ ಬೆನ್ನಲ್ಲೇ, ಟೀಮ್​ ಇಂಡಿಯಾ ಕ್ಯಾಂಪ್​ಗೆ ಬಡಿದ ಆಘಾತ ಅಂದ್ರೆ, ಅದು ಓಪನರ್​​ ಶುಭ್​ಮನ್​ ಗಿಲ್​ ಇಂಜುರಿ.! ಸೋಲಿನ ನಿರಾಸೆಯ ಬೆನ್ನಲ್ಲೇ, ಭರವಸೆಯ ಆಟಗಾರ ಇಂಗ್ಲೆಂಡ್​ ಸರಣಿಗೆ ಅಲಭ್ಯರಾಗಲಿದ್ದಾರೆ ಅನ್ನೋದು, ಟೀಮ್ ​ಮ್ಯಾನೇಜ್​ಮೆಂಟ್​ಗೆ ತಲೆನೋವು ತಂದಿಟ್ಟಿತ್ತು.

ಗಿಲ್​ ಇಂಜುರಿ ಬಳಿಕ ಇಂಗ್ಲೆಂಡ್​​ ಸರಣಿಯಲ್ಲಿ ರೋಹಿತ್​ ಜೊತೆ ಆರಂಭಿಕರಾಗಿ ಕಣಕ್ಕಿಳಿಯೋದ್ಯಾರು ಅನ್ನೋ ವಿಚಾರ, ಹೆಚ್ಚು ಚರ್ಚೆಯಲ್ಲಿತ್ತು. ಆದ್ರೆ ಕಾಫ್​ ಇಂಜುರಿಯೊಂದಿಗೆ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಗಿಲ್​ ಕಣಕ್ಕಿಳಿದಿದ್ರು ಎಂಬ ವಿಚಾರ, ಡಿಬೆಟೇಬಲ್​ ಅಂಶವಾಗಿಯೇ ಇರಲಿಲ್ಲ. ಇದೀಗ ಗಿಲ್​ ಇಂಜುರಿಯನ್ನ ಮುಚ್ಚಿಟ್ಟಿದ್ದು ಯಾಕೆ ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಬಾ ಕರೀಮ್​ ನೀಡಿರುವ ಹೇಳಿಕೆ, ಚರ್ಚೆಯ ತೀವ್ರತೆಯನ್ನ ಇನ್ನಷ್ಟು ಹೆಚ್ಚಿಸಿದೆ.

‘ಗಿಲ್​ ಇಂಜುರಿ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ’
‘ಶುಭ್​ಮನ್​ ಗಿಲ್​ ಇಂಜುರಿ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ. ಆತ ಬಹಳ ದಿನದಿಂದ ಟೀಮ್​ ಇಂಡಿಯಾದೊಂದಿಗೆ ಪ್ರಯಾಣ ಬೆಳೆಸುತ್ತಿದ್ದಾನೆ. ಅಲ್ಲಿರುವ ಮೆಡಿಕಲ್​ ಟೀಮ್​ ಹಾಗೂ ಫಿಸಿಯೋ, ಆಟಗಾರರ ಫಿಟ್​ನೆಸ್​ ಗಮನಿಸುತ್ತಲೇ ಇರುತ್ತಾರೆ. ಇದು ತುಂಬಾ ಆಶ್ಚರ್ಯಕರ ರೀತಿಯಲ್ಲಿದೆ. ಇದಾಗಿದ್ದಾದರೂ ಹೇಗೆ..? ಈ ಬಗ್ಗೆ ಟೀಮ್ ಮ್ಯಾನೇಜ್​ಮೆಂಟ್​ಗೆ ಮೊದಲೇ ಯಾಕೆ ತಿಳಿಯಲಿಲ್ಲಾ..?’ಸಬಾ ಕರೀಮ್​, ಮಾಜಿ ಕ್ರಿಕೆಟಿಗ

ಸಬಾ ಕರೀಮ್​ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕ, ಗಿಲ್​ ಯಾಕೆ ಇಂಜುರಿ ಮುಚ್ಚಿಟ್ರು ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಯಾಗ್ತಿದೆ. ಆ ಮೂಲಭೂತ ಪ್ರಶ್ನೆ ಹುಟ್ಟಿಕೊಂಡ ಬೆನ್ನಲ್ಲೇ, ಹಲವು ಕಾರಣಗಳನ್ನೂ ಕ್ರಿಕೆಟ್​ ವಿಶ್ಲೇಷಕರು ಪಟ್ಟಿ ಮಾಡ್ತಿದ್ದಾರೆ.

ಗಿಲ್​ ಇಂಜುರಿ ಮುಚ್ಚಿಟ್ಟಿದ್ದು ಯಾಕೆ..?
– ಮಹತ್ವದ ಐಸಿಸಿ ಟೂರ್ನಿಯ ಫೈನಲ್​ ಆಡುವ ಆಸೆ
– ತಂಡದಿಂದ ಸ್ಥಾನ ಕಳೆದಕೊಳ್ಳಬೇಕಾದ ಆತಂಕ
– ಪೈಪೋಟಿಯಲ್ಲಿ ಕಳೆದು ಹೋಗಬಹುದಾದ ಭಯ
– ಇಂಜುರಿ ವಿಚಾರದಲ್ಲಿ ಗಿಲ್​ಗಿದ್ದ ನಿರ್ಲಕ್ಷ

ಗಿಲ್​ ಇಂಜುರಿ ಮುಚ್ಚಿಟ್ಟಿದ್ದು ಯಾಕೆ ಎಂಬ ಪ್ರಶ್ನೆ ಹುಟ್ಟಿದ ಬೆನ್ನಲ್ಲೇ, ಮಹತ್ವದ ಐಸಿಸಿ ಟೂರ್ನಿಯನ್ನ ಆಡಬೇಕೆಂಬ ಗಿಲ್​ ಆಸೆಯೇ, ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಒಂದು ವೇಳೆ ಇಂಜುರಿ ಬಹಿರಂಗವಾದ್ರೆ, ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾದ ಆತಂಕ ಹಾಗೂ ಆರಂಭಿಕನ ಸ್ಥಾನಕ್ಕಿರುವ ಪೈಪೋಟಿಯಲ್ಲಿ ಮುಂದೆ ಕಮ್​ಬ್ಯಾಕ್​ಗೆ ಅವಕಾಶವೇ ಸಿಗದಿರಬಹುದು ಅನ್ನೋ ಕಾರಣಕ್ಕೆ, ಬಚ್ಚಿಟ್ಟ ಸಾಧ್ಯತೆಯೂ ಇದೆ. ಇದೆಲ್ಲದರೊಂದಿಗೆ ಕಾಫ್​ ಮಸಲ್​ ಇಂಜುರಿ ತೀವ್ರತೆಯ ಬಗ್ಗೆ ಶುಭ್​ಮನ್​ ಗಿಲ್​ಗಿದ್ದ ನಿರ್ಲಕ್ಷವೂ, ಇದಕ್ಕೆ ಕಾರಣವಿರಬಹುದು ಎನ್ನಲಾಗ್ತಿದೆ.

ಇದೀಗ ಗಿಲ್​ ಇಂಜುರಿ ಬಹಿರಂಗವಾಗಿರೋದು ಆಗಿದೆ. ಪರಿಶೀಲನೆಯ ಬಳಿಕ ವೈದ್ಯರು 8-9 ವಾರಗಳ ಕಾಲ ವಿಶ್ರಾಂತಿಗೆ ಸೂಚನೆ ನೀಡಿರೋದು ಆಗಿದೆ. ಇಂಗ್ಲೆಂಡ್​ ಪ್ರವಾಸದಿಂದ ಗಿಲ್​ ಔಟ್​ ಎಂಬ ಅಧಿಕೃತ ಘೋಷಣೆ ಹೊರಬೀಳಬೇಕಷ್ಟೇ..! ಇಂಜುರಿ ಏನೋ 8 ರಿಂದ 9 ವಾರಗಳ ವಿಶ್ರಾಂತಿಯ ಬಳಿಕ ಸರಿ ಹೋಗಬಹುದು. ಆದ್ರೆ ಈ ಗಾಯದ ಪರಿಣಾಮ ಮಾತ್ರ ದೀರ್ಘ ಕಾಲದ್ದಾಗಿದೆ.

‘ಗಾಯದ ಪರಿಣಾಮ ಸುದೀರ್ಘ..?’
– ತಪ್ಪಿದ ಇಂಗ್ಲೆಂಡ್​​ ಸರಣಿಯಲ್ಲಿ ಆಡುವ ಅವಕಾಶ
– ಮ್ಯಾನೇಜ್​ಮೆಂಟ್​ಗೆ ಗಿಲ್​ ಮೇಲಿದ್ದ ನಂಬಿಕೆ ಕಡಿತ
– ಬದಲಿ ಓಪನರ್​ ಸಕ್ಸಸ್​ ಕಂಡ್ರೆ ಬೆಂಚ್​ಗೆ ಸೀಮಿತ
– ಮರು ಆಯ್ಕೆಗೆ ಫಿಟ್ನೆಸ್​​ ಸವಾಲಾಗೋ ಸಾಧ್ಯತೆ

ಇಂಜುರಿ ಬಗ್ಗೆ ಮೊದಲೇ ಮಾಹಿತಿ ನೀಡಿ ವಿಶ್ರಾಂತಿ ಬಯಸಿದ್ರೆ, ಗಿಲ್​ಗೆ ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಾಡೋ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಆದ್ರೀಗ ವಿಶ್ರಾಂತಿಯ ಕಾರಣದಿಂದ ಇಂಗ್ಲೆಂಡ್​ ಸರಣಿಯಲ್ಲಾಡೋ ಅವಕಾಶ ತಪ್ಪಿದೆ. ಅದಲ್ಲದೇ ಮ್ಯಾನೇಜ್​ಮೆಂಟ್​ ಗಿಲ್​ ಮೇಲಿದ್ದ ನಂಬಿಕೆಯೂ ಕಡಿತವಾಗಿರೋದ್ರಲ್ಲಿ, ಅನುಮಾನವೇ ಇಲ್ಲ. ಇನ್ನು ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬದಲಿ ಓಪನರ್​ ಸಕ್ಸಸ್​​ ಕಂಡಿದ್ದೇ ಆದ್ರೆ, ಗಿಲ್​ ಬೆಂಚ್​ ಸೀಮಿತರಾಗಲಿದ್ದಾರೆ. ಅದಲ್ಲದೇ ವಿಶ್ರಾಂತಿಗೆ ಒಳಗಾಗೋದ್ರಿಂದ ಬಾಡಿ ಫಿಟ್​ನೆಸ್​​​ ಹಾಗೂ ಮ್ಯಾಚ್​ ಫಿಟ್​ನೆಸ್​​ ಎರಡನ್ನೂ, ಮತ್ತೆ ಕಂಡುಕೊಳ್ಳೋದು ಸವಾಲಾಗಲಿದೆ.

ಮೆಡಿಕಲ್​ ಟೀಮ್​ ಬಳಿ ಇರಲಿಲ್ವಾ ಗಿಲ್​ ಫಿಟ್ನೆಸ್ ಮಾಹಿತಿ​​..?
ಗಿಲ್​ ಇಂಜುರಿಯನ್ನ ಬಚ್ಚಿಟ್ಟರು ಎಂಬ ಆರೋಪದ ಜೊತೆಗೆ, ಶುಭ್​ಮನ್​ ಫಿಟ್​​ನೆಸ್​ ಮಾಹಿತಿ ತಂಡದ ಮೆಡಿಕಲ್​ ಟೀಮ್​ ಬಳಿ ಇರಲಿಲ್ವಾ ಎಂಬ ಪ್ರಶ್ನೆಯೂ, ತೋರಿ ಬಂದಿದೆ. ಸಬಾ ಕರೀಮ್​ ಹೇಳುವಂತೆ ಮೆಡಿಕಲ್​ ಟೀಮ್​ ಹಾಗೂ ಫಿಸಿಯೋ ಪ್ರತಿಯೊಬ್ಬ ಆಟಗಾರರ ಫಿಟ್ನೆಸ್​​ ಟ್ರ್ಯಾಕ್​ ರೆಕಾರ್ಡ್​ ಹೊಂದಿರಬೇಕು. ಆದ್ರೆ ಗಿಲ್​ ವಿಚಾರದಲ್ಲಿ ಹಾಗಾಗಿಲ್ಲ.!! ಇಂಜುರಿಗೆ ತುತ್ತಾಗಿದ್ರೂ ಗಿಲ್​ ಫಿಟ್​ ಎಂದು ಆಗಿದ್ದು ಯಾಕೆ ಅನ್ನೋದು, ಮೆಡಿಕಲ್​ ಟೀಮ್​ನ ಕಾರ್ಯದಕ್ಷತೆಯ ಬಗ್ಗೆ ಅನುಮಾನ ಮೂಡಿಸಿದೆ.

ಒಂದು ಇಂಜುರಿ ಆಟಗಾರರ ಕರಿಯರ್​ ಅನ್ನೇ ನುಂಗಿ ಹಾಕಿದ ಉದಾಹರಣೆಗಳು ಸಾಕಷ್ಟಿವೆ. ಈ ಕಾರಣದಿಂದಲೆ ಗಿಲ್​ ಕೂಡ ಗಾಯವನ್ನ ಮುಚ್ಚಿಟ್ಟಿರೋ ಸಾಧ್ಯತೆಯೂ, ಇದೆ. ಆದರೆ ಶುಭ್​ಮನ್​ ಗಿಲ್​ ಗಾಯವನ್ನ ಮುಚ್ಚಿಡದೇ ವಿಶ್ರಾಂತಿಯ ಅಗತ್ಯವಿದೆ ಎಂದಿದ್ರೆ, ಗಾಯದ ಆಫ್ಟರ್​ ಎಫೆಕ್ಸ್​ ಕೂಡ ಕಡಿಮೆಯಾಗ್ತಿತ್ತೋ ಏನೋ..?

The post ಮಾಜಿ ಕ್ರಿಕೆಟಿಗ ಗಿಲ್ ಇಂಜುರಿ.. ಇಂಗ್ಲೆಂಡ್​ ಪ್ರವಾಸದಿಂದ ಗಿಲ್​ ಔಟ್..? appeared first on News First Kannada.

Source: newsfirstlive.com

Source link