ಮಾಜಿ ನಾಯಕ ಧೋನಿ ‘ಸ್ಲಿಮ್ ಌಂಡ್ ಫಿಟ್’ ಹಿಂದಿರೋ ಸೀಕ್ರೆಟ್ ಏನು..?

ಮಾಜಿ ನಾಯಕ ಧೋನಿ ‘ಸ್ಲಿಮ್ ಌಂಡ್ ಫಿಟ್’ ಹಿಂದಿರೋ ಸೀಕ್ರೆಟ್ ಏನು..?

ಟೀಮ್​ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹೊಸ ಲುಕ್​​ನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಧೋನಿ, ಸೋಷಿಯಲ್​ ಮೀಡಿಯಾದಲ್ಲಿ ಸದಾ ಸುದ್ದಿಯಾಗಿರುತ್ತಾರೆ. ದಿನಕ್ಕೊಂದು ನ್ಯೂಲುಕ್​​​ ಧೋನಿ ಪೋಟೋಗಳನ್ನ ಕ್ರಿಕೆಟ್ ಫ್ಯಾನ್ಸ್​ ಪೋಸ್ಟ್​​ ಮಾಡ್ತಿದ್ದು, ಧೋನಿ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಿದ್ದಾರೆ. ಸದ್ಯ 2ನೇ ಹಂತದ IPL​ಗಾಗಿ ಧೋನಿ, ಈಗಿನಿಂದಲೇ ತಯಾರಿ ನಡೆಸ್ತಿದ್ದಾರೆ. ಇದಕ್ಕಾಗಿ ತಮ್ಮ ದೇಹದ ತೂಕವನ್ನೂ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇನ್ನು ಧೋನಿ ಫಿಟ್​ ಆ್ಯಂಡ್​​ ಸ್ಲಿಮ್​​​ ಆಗಿ ಕಾಣಿಸಿಕೊಂಡಿರೋದು, ಅಭಿಮಾನಿಗಳನ್ನ ದಂಗಾಗಿಸಿದೆ. ಈ ಕುರಿತ ಫೋಟೋಗಳು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಇತ್ತೀಚಿಗೆ ಸಂಗೀತ ನಿರ್ದೇಶಕ ರಾಹುಲ್​ ವೈದ್ಯ ಮದುವೆಗೆ ಧೋನಿ ತೆರಳುತ್ತಿದ್ದಾಗ, ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಫೋಟೋಗಳನ್ನ ಕ್ಲಿಕ್ಕಿಸಲಾಗಿದೆ ಎನ್ನಲಾಗಿದೆ.

 

The post ಮಾಜಿ ನಾಯಕ ಧೋನಿ ‘ಸ್ಲಿಮ್ ಌಂಡ್ ಫಿಟ್’ ಹಿಂದಿರೋ ಸೀಕ್ರೆಟ್ ಏನು..? appeared first on News First Kannada.

Source: newsfirstlive.com

Source link