ಮಾಜಿ ಪತಿ ಬರ್ತ್​ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ | Samantha Ruth Prabhu celebrates her pet dog third birthday just a day after Naga Chaitanya birthday


ಮಾಜಿ ಪತಿ ಬರ್ತ್​ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ

ನಾಯಿ ಜನ್ಮದಿನ ಆಚರಿಸಿದ ಸಮಂತಾ

ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರು ಡಿವೋರ್ಸ್​ (Samantha Naga Chaitanya Divorce) ಪಡೆದು ಬಹಳ ದಿನಗಳಾಗಿದ್ದರೂ ಕೂಡ ಅಭಿಮಾನಿಗಳ ವಲಯದಲ್ಲಿ ಬಗೆಬಗೆಯ ಸುದ್ದಿಗಳು ಹರಿದಾಡುವುದು ಇನ್ನೂ ನಿಂತಿಲ್ಲ. ನಾಗ ಚೈತನ್ಯ (Naga Chaitanya) ಅಭಿಮಾನಿಗಳು ಇತ್ತೀಚೆಗೆ ಸಮಂತಾ (Samantha) ಅವರನ್ನು ಟಾರ್ಗೆಟ್​ ಮಾಡಿದ್ದರು. ಮಾಜಿ ಪತಿ ನಾಗ ಚೈತನ್ಯ ಜನ್ಮದಿನಕ್ಕೆ (Naga Chaitanya Birthday) (ನ.23) ಸಮಂತಾ ವಿಶ್​ ಮಾಡಿಲ್ಲ ಎಂದು ಫ್ಯಾನ್ಸ್​ ಗರಂ ಆಗಿದ್ದರು. ಅದಕ್ಕೆ ಸಮಂತಾ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಂಥ ಟೀಕೆ ಕೇಳಿಬಂದ ಮರುದಿನವೇ ಅವರ ಒಂದು ನಡೆ ಅಚ್ಚರಿ ಮೂಡಿಸಿದೆ. ಮಾಜಿ ಪತಿಯ ಜನ್ಮದಿನಕ್ಕೆ ಒಂದೂ ಮಾತನಾಡದ ಅವರು ಈಗ ತಮ್ಮ ಮನೆಯ ನಾಯಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಸದ್ದು ಮಾಡುತ್ತಿದ್ದಾರೆ! ಆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. 

ವಿಚ್ಛೇದನದ ಬಳಿಕ ಸಮಂತಾ ಅವರು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ತಮ್ಮ ಮುದ್ದಾದ ನಾಯಿಗಳ ಜೊತೆಗೆ ಅವರು ಹೆಚ್ಚು ಕಾಲ ಕಳೆಯುತ್ತಾರೆ. ಅವುಗಳ ಫೋಟೋಗಳನ್ನು ಆಗಾಗ ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಮನೆಯ ನಾಯಿಯ 3ನೇ ವರ್ಷದ ಜನ್ಮದಿನವನ್ನು (ನ.24) ಗ್ರ್ಯಾಂಡ್​ ಆಗಿ ಆಚರಣೆ ಮಾಡಿದ್ದಾರೆ.

ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ ಅವರು ‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಸಂಭಾವನೆ ವಿಚಾರದ ಬಗ್ಗೆ ಚಿತ್ರತಂಡದಿಂದಾಗಲೀ ಸಮಂತಾ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಅವರು ಪಡೆಯುತ್ತಾರೆ ಎನ್ನಲಾದ ಸಂಭಾವನೆ ಮೊತ್ತ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಐಟಂ ಸಾಂಗ್​ನಲ್ಲಿ ನಟಿಸಲು ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಕೇಳಿದ್ದಾರೆ ಎಂಬ ಸುದ್ದಿ ಹರಡಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ತೆರೆ ಕಂಡ ನಂತರದಲ್ಲಿ ಸಮಂತಾ ಬೇಡಿಕೆ ಹೆಚ್ಚಿದೆ. ಎಲ್ಲರೂ ಸಮಂತಾ ಕಾಲ್​ಶೀಟ್​ ಪಡೆಯೋಕೆ ಮುಂದೆ ಬಂದಿದ್ದಾರೆ. ಸಮಂತಾ ಮತ್ತೆ ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆಗಿದ್ದಾರೆ. ಆದರೆ, ಅವರು ದೊಡ್ಡ ಮೊತ್ತದ ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ:

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

ನಾಗ ಚೈತನ್ಯ ನೆನಪನ್ನು ಸಂಪೂರ್ಣವಾಗಿ ಡಿಲೀಟ್​ ಮಾಡಿದ ಸಮಂತಾ; ಇಲ್ಲಿದೆ ಸಾಕ್ಷ್ಯ

TV9 Kannada


Leave a Reply

Your email address will not be published. Required fields are marked *