ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇಬ್ಬರೂ ಅವರವರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇಬ್ಬರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರ ನಡುವೆ ಯಾವುದೇ ಕಾಂಟ್ಯಕ್ಟ್ ಇಲ್ಲ ಎಂಬುದು ಇತ್ತೀಚೆಗೆ ಸಾಬೀತಾಗಿತ್ತು. ನಾಗ ಚೈತನ್ಯ ಅವರ ಬರ್ತ್ಡೇ ದಿನ ವಿಶ್ ಮಾಡುವ ಪ್ರಮೇಯಕ್ಕೆ ಸಮಂತಾ ಹೋಗಿಲ್ಲ. ಇದು ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಈಗ ಸಮಂತಾ ಮತ್ತು ಅವರ ಮಾಜಿ ಮಾವ ನಾಗಾರ್ಜುನ ಭೇಟಿಯಾಗಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಕ್ಟೋಬರ್ ತಿಂಗಳ ಆರಂಭದಲ್ಲೇ ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆದರು. ಇಬ್ಬರೂ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ವಿಚ್ಛೇದನದ ಘೋಷಣೆ ಮಾಡಿದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಸಮಂತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈಗ ಅವರು ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ.
ಸಮಂತಾ ಅವರು ಅನುಪಮಾ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಮಾವನ ಸ್ಟುಡಿಯೋದಲ್ಲಿ ಸಮಂತಾ ಕಾಣಿಸಿಕೊಂಡಿದ್ದೇಕೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಸಮಂತಾ ಅವರು ‘ಶಾಕುಂತಲಂ’ ಸಿನಿಮಾ ಚಿತ್ರದ ಡಬ್ಬಿಂಗ್ಗಾಗಿ ಇಲ್ಲಿಗೆ ಆಗಮಿಸಿದ್ದರು ಎಂದು ವರದಿ ಆಗಿದೆ.
‘ಬಹಳ ಬೇಸರದಿಂದ ಇದನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ನಡೆದಿರುವುದು ನಿಜಕ್ಕೂ ಬೇಸರದ ವಿಚಾರ. ಪತಿ ಮತ್ತು ಪತ್ನಿ ನಡುವೆ ಏನು ನಡೆದಿದೆ ಅನ್ನೋದು ತುಂಬಾನೇ ಖಾಸಗಿಯಾದುದ್ದು. ಸ್ಯಾಮ್ ಮತ್ತು ಚಾಯ್ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜತೆ ಕಳೆದ ಕ್ಷಣಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಸಮಂತಾ ಯವಾಗಲೂ ನನಗೆ ಪ್ರೀತಿಪಾತ್ರಳು. ಇಬ್ಬರಿಗೂ ದೇವರು ಆಶೀರ್ವಾದ ಮಾಡಲಿ’ ಎಂದು ನಾಗಾರ್ಜುನ ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ಮಗನಿಗೆ ವಿಚ್ಛೇದನ ಕೊಟ್ಟರೂ ಮಾಜಿ ಸೊಸೆ ಮೇಲೆ ಪ್ರೀತಿ ತೋರಿದ ಅಕ್ಕಿನೇನಿ ನಾಗಾರ್ಜುನ
‘ಪುನೀತ್ ರಾಜ್ಕುಮಾರ್ ಇನ್ನೂ ಇಲ್ಲೇ ಇದ್ದಾರೆ ಅನಿಸುತ್ತಿದೆ’; ಅಕ್ಕಿನೇನಿ ನಾಗಾರ್ಜುನ ಬೇಸರ