ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ವಂಚಿಸಲು ಯತ್ನಿಸಿದ ಸೈಬರ್ ಖದೀಮರು

ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ವಂಚಿಸಲು ಯತ್ನಿಸಿದ ಸೈಬರ್ ಖದೀಮರು

ಬೆಂಗಳೂರು: ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಿಗೆ ಕರೆ ಮಾಡಿದ್ದ ಸೈಬರ್​​ ಕಳ್ಳರು ಅವರ ಕ್ರೆಡಿಟ್​​ ಕಾರ್ಡ್​ ಮಾಹಿತಿ ಪಡೆದುಕೊಳ್ಳಲು ಮುಂದಾಗಿ ವಂಚಿಸಲು ಯತ್ನಿಸಿರುವ ಘಟನೆ ನಡೆದಿದೆ.

ಜೂನ್ 14ರ ಸಂಜೆ 6 ಗಂಟೆ ವೇಳೆಗೆ ಸಂತೋಷ್​ ಹೆಗ್ಡೆ ಅವರ ಮೊಬೈಲ್​​ ಕರೆ ಮಾಡಿದ್ದ ಮಹಿಳೆಯೊಬ್ಬಳು, ನಿಮ್ಮ ಕ್ರೆಡಿಟ್ ಕಾರ್ಡ್​​ಗೆ ರಿವಾರ್ಡ್ ಬಂದಿದೆ.. ಆದರೆ ಅವಧಿ ಮುಕ್ತಾಯವಾಗುತ್ತಿವೆ ಎಂದು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಹೆಗ್ಡೆ ಅವರು ಕರೆಯನ್ನು ಕಟ್ ಮಾಡಿದ್ದರು ಎನ್ನಲಾಗಿದೆ.

ಇದಾದ ಕೆಲ ಸಮಯದಲ್ಲೇ ಅವರ ಮೊಬೈಲ್​​ಗೆ ಎರಡು ಒಟಿಪಿಗಳು ಬಂದಿದೆ. ಆಗ ಅದು ವಂಚಕರ ಕರೆ ಎಂಬುದು ಗೊತ್ತಾಗಿದ್ದು, ಒಟಿಪಿ ಸಂಖ್ಯೆಯನ್ನ ಅವರೊಂದಿಗೆ ಹಂಚಿಕೊಳ್ಳದೆ ಎಚ್ಚರಿಕೆ ವಹಿಸಿದ್ದಾರೆ. ಆ ಬಳಿಕ ವಂಚಿಸಲು ಯತ್ನಿಸಿದ ಅಪರಿಚಿತರನ್ನು ಪತ್ತೆ ಮಾಡಬೇಕೆಂದು ಸೈಬರ್​ ಪೊಲೀರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

The post ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ವಂಚಿಸಲು ಯತ್ನಿಸಿದ ಸೈಬರ್ ಖದೀಮರು appeared first on News First Kannada.

Source: newsfirstlive.com

Source link