ಮಾಜಿ ಶಾಸಕ ವಿಜಯಾನಂದ ಮನೆಯಲ್ಲಿ ಭಾರೀ ಹೈಡ್ರಾಮಾ.. ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಆವಾಜ್​

ಮಾಜಿ ಶಾಸಕ ವಿಜಯಾನಂದ ಮನೆಯಲ್ಲಿ ಭಾರೀ ಹೈಡ್ರಾಮಾ.. ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಆವಾಜ್​

ಬಾಗಲಕೋಟೆ: ಹುನಗುಂದ ‌ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ‌ ಮನೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆಮಾಡಿದ್ದಾರೆ. ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು ಬಂದಿದ್ದಾರೆ.

ಕಾಶಪ್ಪನವರ ‌ಮನೆಯಲ್ಲಿ ಹೈಡ್ರಾಮಾವೇ ನಡೆದಿದ್ದು ಇಳಕಲ್ ಪಿಎಸ್ ಐ, ಎಸ್ ಬಿ ಪಾಟಿಲ್, ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರ ಕಾಶಪ್ಪನವರ ಮನೆಗೆ ಭೇಟಿನೀಡಿದ್ದಾರೆ. ಸಿಪಿಐ, ಪಿ ಎಸ್ ಐ ಜೊತೆ ಕಾಶಪ್ಪನವರ್ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ನಮ್ಮ ಮನೆಯಲ್ಲಿ ಗಲಾಟೆ ಎಲ್ಲಿ ಆಗಿದೆ ಸಾಬೀತು ಮಾಡಿ.. ಎಸ್ ಪಿಯವರನ್ನ ಕರೆಸಿ, ಎಲ್ಲಿದೆ ಎಸ್ ಪಿ ಆದೇಶ..? ಮನೆಗೆ ಹೇಗೆ ಬಂದ್ರಿ ಎಂದು ಪೊಲೀಸರ ‌ಮೇಲೆ ಕಾಶಪ್ಪನವರ್ ಗರಂ ಆಗಿದ್ದಾರೆ. ಕಾಶಪ್ಪನವರ ಮನೆಗೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಹಳೇ ಕೇಸ್ ಬೇಲೆಬಲ್ ವಾರೆಂಟ್ ಹಿಡಿದು ಪೊಲೀಸರು ಬಂದಿದ್ದರು ಎಂದು ಹೇಳಲಾಗಿದೆ.

ನೀವು ವಾರೆಂಟ್ ಅಂತ ಬಂದಿಲ್ಲ.. ನಮ್ಮ ಮನೆಯಲ್ಲಿ ಗಲಾಟೆ ಅಂತ ಹೇಳಿದಾರೆ ಅದಕ್ಕೆ ಬಂದಿದೀರಿ.. ನೀವು ಮನೆಗೆ ನುಗ್ಗಿದ್ರಿ.. ಗಲಾಟೆ ಅಂತ ಹೇಳಿದ್ರಿ.. ಎಲ್ಲಿ ಗಲಾಟೆ ಆಗಿದೆ ತೋರಿಸಿ. ನಾನು ತನಿಖೆಗೆ ಕೊಡುತ್ತೇನೆ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರಂತೆ. ಅಲ್ಲದೇ ಅರೆಸ್ಟ್ ಮಾಡೋಕೆ ಬಂದಿದ್ದೀರಿ.. ಅರೆಸ್ಟ್ ಮಾಡಿ.. ನೀವು ಕೇಸ್ ಹಾಕ್ತಿನಿ.. ನೋಡ್ಕೊತೀನಿ ಅಂದಿದ್ದೀರಿ. ಅರೆಸ್ಟ್ ಮಾಡಿ, ಎಷ್ಟು ಕೇಸ್ ಮಾಡ್ತೀರಿ ಮಾಡಿ. ಪೊಲೀಸರು ನನ್ ಮನೆಗೆ ಆಕ್ರಮವಾಗಿ ನುಗ್ಗಿದ್ದಾರೆ. ವಿಥೌಟ್ ಸರ್ಚ್ ವಾರೆಂಟ್ ನುಗ್ಗಿದಾರೆ ಎಂದು ಕಾಶಪ್ಪನವರ್ ಆರೋಪಿಸಿದ್ದಾರೆ.

ಬೆಂಬಲಿಗರನ್ನು ಕರೆದುಕೊಂಡು‌ ಮನೆಯಲ್ಲಿ ಕೂತ ಕಾಶಪ್ಪನವರ್ ಅವರು ಹುನಗುಂದ ಎಮ್ ಎಲ್ ಎ ದೊಡ್ಡನಗೌಡ ಕುಮ್ಮಕ್ಕಿನಿಂದ ಬಂದಿದ್ದೀರಿ. ಮನೆಗೆ ಬಂದು ದೌರ್ಜನ್ಯ ಮಾಡ್ತಿದ್ದೀರಿ. ಈ ವೇಳೆ ನಾವು ಯಾರೇ ಕರೆ ಮಾಡಿದರೂ ಬರುತ್ತೇವೆ ಎಂದು ಕಾಶಪ್ಪನವರ್​ಗೆ ಪೊಲೀಸರು ತಿಳಿಸಿದ್ದಾರೆ.

The post ಮಾಜಿ ಶಾಸಕ ವಿಜಯಾನಂದ ಮನೆಯಲ್ಲಿ ಭಾರೀ ಹೈಡ್ರಾಮಾ.. ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಆವಾಜ್​ appeared first on News First Kannada.

Source: newsfirstlive.com

Source link