ಬೆಂಗಳೂರು: ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್ಐಟಿ ) ಇಂದು ಹೈಕೋರ್ಟ್​ಗೆ ಪ್ರಕರಣದ ತನಿಖಾ ವರದಿ ಸಲ್ಲಿಸಿದೆ.

ಈ ಹಿಂದೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಪೊಲೀಸರು ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.ಅದೇ ಪ್ರಕಾರ ಇಂದು  ಎಸ್ಐಟಿಯ ಹಿರಿಯ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಗೆ ತನಿಖಾ ವರದಿ ಸಲ್ಲಿಸಿದ್ದಾರೆ.

ಮಾಜಿ ಸಚಿವರ ಮೇಲಿನ ಬೇರೆ ಬೇರೆ ಎಫ್ಐಆರ್​ಗಳ ತನಿಖಾ ವರದಿಯನ್ನು ಕೂಡ ಸಲ್ಲಿಕೆ ಮಾಡಿದ್ದು, ನಾಳೆ ಇದನ್ನ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠಕ್ಕೆ ರವಾನೆ ಮಾಡಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ನಾಳೆ ತನಿಖಾ ವರದಿ ಪರಿಶೀಲಿಸಿ ವಿಚಾರಣೆ ನಡೆಸಲಿರುವ ಹೈಕೋರ್ಟ ಪ್ರಕರಣವನ್ನು ಸಿಬಿಐಗೆ ವಹಿಸಬೇಕಾ.? ಎಸ್ಐಟಿ ತನಿಖೆಯೇ ಸಾಕಾ.? ಎಂಬ ನಿರ್ಧಾರ ಕೈಗೊಳ್ಳಲಿದ್ದು ನಾಳೆ ಹೈಕೋರ್ಟ್​ನಿಂದ ಮಹತ್ವದ ನಿರ್ಧಾರ ಹೊರ ಬೀಳಲಿದೆ.

The post ಮಾಜಿ ಸಚಿವರ ಸಿಡಿ ಕೇಸ್; ಹೈಕೋರ್ಟ್​ಗೆ ತನಿಖಾ ವರದಿ ಸಲ್ಲಿಸಿದ ಎಸ್ಐಟಿ appeared first on News First Kannada.

Source: newsfirstlive.com

Source link