ಮಾಜಿ ಸಚಿವರ ಸಿಡಿ ಪ್ರಕರಣ; ಯುವತಿಗೆ ಎದುರಾಯ್ತು ಬಂಧನದ ಭೀತಿ

ಮಾಜಿ ಸಚಿವರ ಸಿಡಿ ಪ್ರಕರಣ; ಯುವತಿಗೆ ಎದುರಾಯ್ತು ಬಂಧನದ ಭೀತಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಬಹಿರಂಗ ಪ್ರಕರಣದಲ್ಲಿ ‌ಮಹತ್ವದ ಬೆಳವಣಿಯಾಗಿದ್ದು, ಪ್ರಕರಣದಲ್ಲಿ ಯುವತಿಗೆ ಬಂಧನದ ಭೀತಿ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಕುರಿತಂತೆ ರಮೇಶ್ ಜಾರಕಿಹೊಳಿ ನೀಡಿದ ದೂರಿನ ಅನ್ವಯ ಬಂಧನ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್​​ಗೆ ಯುವತಿಯ ಪರ ವಕೀಲ ಸಂಕೇತ್ ಏಣಗಿ ಹೇಳಿಕೆ ನೀಡಿದ್ದಾರೆ. ಯುವತಿ ನೀಡಿದ ದೂರಿನ ಅಡಿ ರಮೇಶ್ ಜಾರಕಿಹೊಳಿ ಬಂಧಿಸಿಲ್ಲ. ಆದರೆ ರಮೇಶ್ ಜಾರಕಿಹೊಳಿ ದೂರಿನಡಿ ಬಂಧಿಸುವ ಸಾಧ್ಯತೆ ಇದ್ದು, ಸಂತ್ರಸ್ತ ಯುವತಿಯನ್ನು ಬಂಧಿಸದಂತೆ ಎಸ್​ಐಟಿಗೆ ನಿರ್ದೇಶನ ನೀಡಲು ಹಾಗೂ ಸಿಆರ್​ಪಿಸಿ 482 ಅಡಿ ಪ್ರಕರಣ ರದ್ದು ಕೋರಿ ಕೋರ್ಟಿಗೆ ಮನವಿ ಮಾಡಿದ್ದಾರೆ.

ಆದರೆ ಸಿಆರ್​​ಪಿಸಿ 482 ಅಡಿ ದಾಖಲಾಗಿರುವ ಪ್ರಕರಣವನ್ನು ರದ್ದು ಪಡಿಸುವಂತೆ ಕೋರ್ಟ್ ಸೂಚಿಸಲು ಸಾಧ್ಯವಿಲ್ಲ. ಅಲ್ಲದೇ ಯುವತಿಯನ್ನು ಬಂಧಿಸದಂತೆ ಸೂಚಿಸಲು ಸಾಧ್ಯವಿಲ್ಲ. ಬೇಕಿದ್ದರೆ ಪ್ರತ್ಯೇಕವಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿ ಎಂದು ಹೈಕೋರ್ಟ್ ನ್ಯಾ. ಸುನೀಲ್ ದತ್ ಯಾದವ್ ಸೂಚನೆ ನೀಡಿದ್ದು, ಸದ್ಯದಲ್ಲೇ ಸಂತ್ರಸ್ತೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

The post ಮಾಜಿ ಸಚಿವರ ಸಿಡಿ ಪ್ರಕರಣ; ಯುವತಿಗೆ ಎದುರಾಯ್ತು ಬಂಧನದ ಭೀತಿ appeared first on News First Kannada.

Source: newsfirstlive.com

Source link