ಬೆಂಗಳೂರು: ಮಾಜಿ ಸಚಿವ ಪ್ರೊ. ಮಮ್ತಾಜ್ ಅಲೀ ಖಾನ್ ವಿಧಿವಶರಾಗಿದ್ದಾರೆ. 94 ವರ್ಷದ ಖಾನ್ ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ ಬೆಂಗಳೂರಿನ ಗಂಗಾನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಮ್ತಾಜ್ ಅಲೀ ಖಾನ್  ಅವರು 2008ರಲ್ಲಿ ಯಡಿಯಾರಪ್ಪ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿದ್ರು. ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ಏಕೈಕ ಸಚಿವರಾಗಿದ್ದವರು ಮುಮ್ತಾಜ್ ಅಲೀ ಖಾನ್.

The post ಮಾಜಿ ಸಚಿವ ಪ್ರೊ. ಮಮ್ತಾಜ್ ಅಲೀ ಖಾನ್ ನಿಧನ appeared first on News First Kannada.

Source: newsfirstlive.com

Source link