ಮಾಜಿ ಸಾರಿಗೆ ಸಚಿವರ ಕ್ಷೇತ್ರದಲ್ಲಿ ಸಾರಿಗೆ ಅವ್ಯವಸ್ಥೆ; ಬಸ್​ ತಡೆದು ಪ್ರತಿಭಟನೆಗೆ ನಿಂತ ಸ್ಟುಡೆಂಟ್ಸ್​

ಚಿಕ್ಕೋಡಿ: ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಸಾರಿಗೆ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಬಸ್ ತಡೆಹಿಡಿದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಅಥಣಿ -ಬಡಚಿ ಗ್ರಾಮದಲ್ಲಿ ನಡೆದಿದೆ.

ನಿಗದಿತ ಸಮಯಕ್ಕೆ ಬಸ್ ಸಂಚಾರ ಇಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿದಿನವೂ ಬಸ್ ನಿಲ್ಲಿಸಿದೆ ಹೊರಡುವ ಬಸ್ ಚಾಲಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಾರದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿಜಯಪುರ- ಸಂಕೇಶ್ವರ್ ರಾಜ್ಯ ಹೆದ್ದಾರಿಯಲ್ಲಿ ಬಸ್​ ತಡೆದು ಪ್ರತಿಭಟನೆಗೆ ನಿಂತಿದ್ದಾರೆ.

ಅಥಣಿ ತಾಲೂಕಿನಲ್ಲಿ ವಿಪರೀತವಾದ ಬಸ್ ಸಂಚಾರ ಸಮಸ್ಯೆಯಾಗುತ್ತಿದೆ. ಗ್ರಾಮಕ್ಕೆ ಬಸ್ ಬಂದರು ಚಾಲಕರು ಮಾತ್ರ ನಿಲ್ಲಿಸಲ್ಲ ಎಂದು ಆರೋಪ ಮಾಡಿರುವ ವಿದ್ಯಾರ್ಥಿಗಳು ಶೀಘ್ರವಾಗಿ ಬಸ್ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ವಿಷಯ ತಿಳಿದ ಅಥಣಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ:ಎದುರಾಳಿಗೆ ಸೋಲಿನ ರುಚಿ ತೋರಿಸಲು ಸಾಹುಕಾರ್ ಭಾರೀ ಕಸರತ್ತು.. ಬಾಣ ತಿರುಗಿಸಲು ‘ಕೈ’ ಶಾಸಕಿ ಸ್ಕೆಚ್

News First Live Kannada

Leave a comment

Your email address will not be published. Required fields are marked *