ಚಿತ್ರದುರ್ಗ: ಹವಾಮಾನಾ ವೈಪರೀತ್ಯ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ.
ನಿಗದಿಯಂತೆ ಚಿತ್ರದುರ್ಗದಿಂದ ತುಮಕೂರಿಗೆ ಹೆಲಿಕಾಪ್ಟರ್ನಲ್ಲಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದರು. ಆದ್ರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ.. ಹಾರಿದ ಕೆಲ ಹೊತ್ತಿನಲ್ಲೇ ಮತ್ತೆ ಹೆಲಿಕಾಪ್ಟರ್ ಚಿತ್ರದುರ್ಗದ ಹೆಲಿಪ್ಯಾಡ್ಗೆ ಮರಳಿ ಬಂದಿಳಿಯಿತು. ಭಾರೀ ಮಳೆಯ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಪೈಲಟ್ ಮುಂದೆ ಹಾರುವುದು ಅಪಾಯಕಾರಿ ಎಂದು ತಿಳಿಸಿದ್ರು ಎನ್ನಲಾಗಿದೆ. ಒಂದು ವೇಳೆ ಹವಾಮಾನ ವೈಪರೀತ್ಯದ ಹೊರತಾಗಿಯೂ ಹೆಲಿಕಾಪ್ಟರ್ ಹಾರಾಟ ಮುಂದುವರೆಸಿದ್ರೆ ಅಪಾಯಕ್ಕೆ ಆಹ್ವಾನ ನೀಡುವಂತೆ ಆಗುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ಗೆ ಮರಳಿ ಹೆಲಿಕಾಪ್ಟರ್ ಬಂದಿಳಿದಿದೆ. ಇನ್ನು ಚಿತ್ರದುರ್ಗಕ್ಕೆ ಬಂದಿಳಿದ ಸಿದ್ದರಾಮಯ್ಯ, ಬಳಿಕ ಕಾರಿನಲ್ಲಿ ಮೈಸೂರಿಗೆ ಪ್ರಯಾಣ ಬೆಳಿಸಿದ್ದಾರೆ.
ಮಾಜಿ ಸಿಎಂಗೆ ಹೆಲಿಕಾಪ್ಟರ್ ಕಾಟ; ಸ್ವಲ್ಪದರಲ್ಲಿಯೇ ಬಚಾವ್ ಆದ ಸಿದ್ದರಾಮಯ್ಯ https://t.co/YFGl8w2zSL @siddaramaiah pic.twitter.com/01EsBnbuB6
— NewsFirst Kannada (@NewsFirstKan) November 28, 2021