ಮೈಸೂರು: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ ಹಿನ್ನೆಲೆ‌ ವಿಪಕ್ಷ ನಾಯಕ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆದರು. ನಂತರ ಮಾತನಾಡಿದ ಅವರು.. ಕೃಷ್ಣ ಅವರ ವ್ಯಕ್ತಿತ್ವದ‌ ಗುಣಗಾನ ಮಾಡಿದ‌ರು.

ನಾನು ಕೃಷ್ಣ ಇಬ್ಬರೂ ಒಟ್ಟಿಗೆ ವಕೀಲ ವೃತ್ತಿ ಆರಂಭಿಸಿದ್ದೆವು.. ನನ್ನದು ಕೃಷ್ಣಾರದ್ದು ಒಂದೇ ಚಿಂತನೆಯಾಗಿದೆ. ಬದುಕಿನುದ್ದಕ್ಕೂ ಸರಳ ಸಜ್ಜನಿಕೆಯನ್ನ ಕೃಷ್ಣ ಮೈಗೂಡಿಸಿಕೊಂಡಿದ್ದರು. ಸರಳ ಸಜ್ಜನಿಕೆಯ ಜೊತೆಗೆ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.
ಕೃಷ್ಣ ಅವರ ಬದುಕು, ರಾಜಕಾರಣ ಯುವ ಜನರಿಗೆ ಆದರ್ಶವಾಗಬೇಕು. ಕೃಷ್ಣ ನಿಧನದಿಂದ‌ ಒಬ್ಬ ಗಾಂಧಿವಾದಿಯನ್ನ ಕಳೆದಕೊಂಡಿದ್ದೇವೆ.

ಭ್ರಷ್ಟಾಚಾರ ಮುಕ್ತ ರಾಜಕಾರಣವರನ್ನ ಅವರು ಬಯಸಿದ್ದರು. ಇವತ್ತಿನ ರಾಜಕೀಯ ವ್ಯವಸ್ಥೆಗೆ ಕೃಷ್ಣ ರಾಜಕೀಯ ಒಗ್ಗುವುದಿಲ್ಲ. ಗಾಂಧಿತತ್ವವನ್ನ ಮೈಗೂಡಿಸಿಕೊಂಡಿದ್ದ ಅಪರೂಪದ ರಾಜಕಾರಣಿ, ‌ಸ್ನೇಹಮಯಿ ವ್ಯಕ್ತಿ ಅವರು. ಒಳ್ಳೆಯ ಸ್ನೇಹಿತನನ್ನ ಕಳೆದುಕೊಂಡಿದ್ದೇನೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ಕೃಷ್ಣ, ಮೀಸೆರಾಮೇಗೌಡ ಭೇಟಿ ಮಾಡುತ್ತಿದ್ರು. ಆದರೆ ಇತ್ತೀಚೆಗೆ ಭೇಟಿಯಾಗಿರಲಿಲ್ಲ ಅಷ್ಟೇ.. ಕೊನೆಗಾಲದಲ್ಲಿ ಹೀಗಾಗಬಾರದಿತ್ತು ಎಂದು ಭಾವುಕರಾಗಿ ಸಿದ್ದರಾಮಯ್ಯ ಮಾತನಾಡಿದ್ರು.

The post ಮಾಜಿ ಸ್ಪೀಕರ್ ಕೃಷ್ಣ ಭ್ರಷ್ಟಾಚಾರ ಮುಕ್ತ ರಾಜಕಾರಣ ಬಯಸಿದ್ದರು- ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link