ಮಾಟ-ಮಂತ್ರಗಳ ಮೂಲಕ ಕ್ರಿಶ್ಚಿಯನ್ನರು ಅನ್ಯಧರ್ಮೀಯರನ್ನು ತಮ್ಮ ಧರ್ಮಕ್ಕೆ ಎಳೆದುಕೊಳ್ಳುತ್ತಾರೆ: ಪ್ರಮೋದ್ ಮುತಾಲಿಕ್ | Christians use black magic to convert other Hindus into Christianity says Pramod Mutalik

ಶ್ರೀರಾಮ ಸೇನೆ ಸಂಸ್ಥಾಪಕರಾಗಿರವ ಪ್ರಮೋದ್ ಮುತಾಲಿಕ್ ಅವರು ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವ ವ್ಯಕ್ತಿ. ಅವರು ಯಾವುದೇ ಸಭೆಯಲ್ಲಿ ಮಾತಾಡುವಾಗಲೂ ಅದರಲ್ಲಿ ಹಿಂದುತ್ವದ ಛಾಯೆ ಇರುತ್ತದೆ. ಗುರುವಾರ ಅವರು ವಿಜಯಪುರನಲ್ಲಿದ್ದರು. ನಗರದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಸದರಿ ಸಭೆಯನ್ನು ಮುತಾಲಿಕ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಅವರು ಮತಾಂತರ ಮಾಡುತ್ತಿರುವ ಕ್ರೈಸ್ತ ಧರ್ಮೀಯರ ವಿರುದ್ಧ ಹರಿಹಾಯ್ದರು.

ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡುವ ಕೆಲಸ ಬಹಳ ಬಿರುಸಿನಿಂದ ಸಾಗುತ್ತಿದೆ. ಅನ್ಯ ಧರ್ಮೀಯರನ್ನು ಮೊದಲು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಿಶ್ಚಿಯನ್ನರು ನಂತರದ ದಿನಗಳಲ್ಲಿ ಅವರನ್ನು ತಮ್ಮ ಧರ್ಮಕ್ಕೆ ಎಳೆದುಕೊಳ್ಳುತ್ತಾರೆ ಎಂದು ಮುತಾಲಿಕ್ ಹೇಳಿದರು.

ಯಾವುದೇ ಒಂದು ಉಚ್ಛವರ್ಗದ ಅಥವಾ ಬ್ರಾಹ್ಮಣರ ಮನೆಯಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ ಅವರಿಗಾಗಿ ಪ್ರಾರ್ಥನೆ ಮಾಡುವ ನೆಪದಲ್ಲಿ ಕ್ರಿಶ್ಚಿಯನ್ನರು ಮನೆಯನ್ನು ಪ್ರವೇಶಿಸುತ್ತಾರೆ. ಅದಾದ ಮೇಲೆಯೂ ಅವರ ಮನೆಗೆ ಭೇಟಿ ನೀಡುವುದನ್ನು ಮುಂದುವರಿಸುತ್ತಾರೆ. ಹಾಗೆ ಆ ಕುಟುಂಬದ ವಿಶ್ವಾಸಕ್ಕೆ ಪಾತ್ರರಾಗಿ ಕೊನೆಗೆ ಅವರನ್ನು ತಮ್ಮ ಧರ್ಮಕ್ಕೆ ಸೆಳೆದುಕೊಂಡೇ ಬಿಡುತ್ತಾರೆ ಎಂದು ಮುತಾಲಿಕ್ ಹೇಳಿದರು.

ವಶೀಕರಣ, ಮಾಟ-ಮಂತ್ರಗಳ ಮೂಲಕವೂ ಕ್ರಿಶ್ಚಿಯನ್ನರು ಮತಾಂತರ ಮಾಡುತ್ತಾರೆ ಎಂದು ಮುತಾಲಿಕ್ ಹೇಳಿದರು. ಅಮೇರಿಕಾದ ಮಿಶನರಿ ಬೆನ್ನಿ ಹಿನ್ ಹಾಗೆ ಮಾಡಿಯೇ ಅನೇಕ ಜನರನ್ನು ಮತಾಂತರ ಮಾಡಿದ್ದಾನೆ ಎಂದು ಅವರು ಹೇಳಿದರು.

ಇದನ್ನೂ ಓದಿ:   ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ

TV9 Kannada

Leave a comment

Your email address will not be published. Required fields are marked *