ಮಾಡ್ರನ್​ ಲುಕ್​ನಲ್ಲಿ ಸಖತ್ ಹಾಟ್​​ ಆಗಿ​ ಮಿಂಚುತ್ತಿರೋ ಲೇಡಿ ಬಾಂಡ್​ ಸತ್ಯಾ..!


ಸತ್ಯಾ ಸೀರಿಯಲ್​ನ ಟೈಟಲ್​ ಟ್ರ್ಯಾಕ್​ ಕೇಳಿದ್ರೇನೆ ನಮ್ಮ​ ಸತ್ಯಾ ಯಾವ ರೀತಿ ಹುಡುಗಿ ಹೇಗೆ ಹವಾ ಮೈಂಟೆನ್​ ಮಾಡಿದ್ದಾಳೆ ಅಂತಾ ನಿಮಗೆ ತಿಳಿಯತ್ತೆ.. ಸತ್ಯಾ ಹೆಸರು ಕೇಳಿದ್ರೆ ಏರಿಯಾ ಹುಡುಗರೆಲ್ಲಾ ಗಢ ಗಢ ಅಂತಾ ನಡಗ್ತಾರೆ.. ನಮ್ಮ​ ಲೇಡಿ ಬಾಂಡ್​ ಸತ್ಯಾ ಅಂದ್ರೆ ಕಡಿಮೆನಾ ಒಂದು ಹೆಣ್ಣು ಹೀಗೂ ಇರ್ಬಹುದು ಅನ್ನೊದನ್ನ ಜನಕ್ಕೆ ಪ್ರೂವ್​ ಮಾಡಿದ್ದಾಳೆ..

ಸತ್ಯಾಳ ಸ್ಟೈಲ್,​ ಅವ್ಳ ಗೆಟಪ್,​ ಅವ್ಳು ಅವಾಜ್​ ಹಾಕುವ ರೀತಿ ಅಬ್ಭಾ.. ಸೂಪರೋ ಸೂಪರ್​.. ಸಾಕಷ್ಟು ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ ನಮ್​ ರಗಡ್​ ಸತ್ಯಾ..

ಸದ್ಯ ಧಾರಾವಾಹಿಯಲ್ಲಿ ನಮ್ಮ​ ಸತ್ಯಾ ಸ್ವಲ್ಪ ಡಲ್​ ಆಗಿದ್ದಾಳೆ.. ಅಮುಲ್​ ಬೇಬಿ ತಾಯಿ ಮಾತನಾಡಿದನ್ನ ಕೊಂಚ ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಂಡಿದ್ದಾಳೆ.. ಆದ್ರೆ ಇದು ಕಥೆ ಬಿಡಿ. ನಾನೂ ಸತ್ಯ ಬಗ್ಗೆ ಹೇಳೊಕೆ ಮತ್ತೊಂದು ಮುಖ್ಯ ವಿಷ್ಯಯಿದೆ.

ಹೌದು, ಲೇಡಿ ಬಾಂಡ್​ ಸತ್ಯಾ ಈಗ ಬೇಬಿ ಡಾಲ್​ ಆಗಿದ್ದಾರೆ.. ಪಿಂಕ್​ ಡ್ರೆಸ್​ ಧರಿಸಿ ಫುಲ್​ ಮಾರ್ಡ್​​ ಲುಕ್​ನಲ್ಲಿ ಮಿಂಚಿದ್ದಾರೆ..
ಸತ್ಯಾಳನ್ನ ನೀವು ಇಷ್ಟು ದಿನ ಟಾಮ್​ ಬಾಯ್​ ಲುಕ್​ನಲ್ಲಿಯೇ ನೋಡಿದ್ರಿ. ಆದ್ರೇ ಅವರ ಈ ಹೊಸ ಲುಕ್ ನೋಡಿ​ ನೀವು ಫುಲ್​ ಫಿದಾ ಆಗೋದು ಗ್ಯಾರಂಟಿ…ಇದರಲ್ಲಿ ಅವರು ಸಖತ್​ ಗ್ಲಾಮರ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೀರೆಯಲ್ಲಿ ಅಂತೂ ಮುದ್ದು ಗೊಂಬೆಯಂತೆ ಕಾಣಿಸುವ ಸತ್ಯಾ, ಸಾಂಪ್ರಾದಯಕ, ವೆಸ್ಟರ್ನ್​ ಹೀಗೆ ಯಾವುದೇ ಕಾಸ್ಟೂಮ್​ ಹಾಕಿದ್ರು ಸೂಪರ್ಬ್​ ಬಿಡಿ.

ಒಟ್ನಲ್ಲಿ ಸತ್ಯಾ ಅಲಿಯಾಸ್​ ಗೌತಮಿ ರಿಯಲ್​​ ಲೈಫ್​ನಲ್ಲಿ ತುಂಬಾನೇ ಸಾಫ್ಟ್​ ಹುಡುಗಿ. ಮಾಡ್ಲಿಂಗ್​ ಕ್ಷೇತ್ರದಲ್ಲಿಯೂ ಹೆಸರು ಮಾಡಿದವರು. ಆದ್ರೇ ರಗಡ್​ ಆಗಿರುವ ಸತ್ಯಾ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದು, ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *