‘ಮಾತುಕೊಟ್ಟ ಬಿಎಸ್​​ವೈ ಮಾತಿಗೆ ತಪ್ಪಿ ಮನೆಯಲ್ಲಿ ಕುಳ್ತಿದ್ದಾರೆ’ -ಗುಡುಗಿದ ಪ್ರಸನ್ನಾನಂದಪುರಿ ಸ್ವಾಮೀಜಿ

ಬೆಳಗಾವಿ: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು ಎಂಬ ಎಸ್​​ಟಿ ಸಮುದಾಯದ ಬಹುವರ್ಷಗಳ ಬೇಡಿಕೆ ಈಡೇರುಸುವಂತೆ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಅಕ್ಟೋಬರ್​ 20ಕ್ಕೆ ಗಡುವು ನೀಡಿದ್ದಾರೆ. ಈ ನಡುವೆ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ‘ಜನ ಜಾಗೃತಿಗಾಗಿ ಜನ ಸ್ಪಂದನ’ ಕಾರ್ಯಕ್ರಮ ನಡೆಸಿ ಸಮುದಾಯದ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ.

ಇಂದು ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ವಾಲ್ಮೀಕಿ ಸಮುದಾಯದ ಆಶೋತ್ತರಗಳನ್ನ ಸ್ಪಂದಿಸಿಲ್ಲ. ಸಂವಿಧಾನದ ಹಕ್ಕು ನೀಡದೇ ಇದ್ರೆ ಹೋರಾಟ ಅನಿವಾರ್ಯ. ಮಾಜಿ ಸಿಎಂ ಯಡಿಯೂರಪ್ಪ , ಮುಖ್ಯಮಂತ್ರಿ ಆಗಿದ್ದಾಗ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಭರವಸೆ ನೀಡಿದ್ದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿ ಬರಲಿ, ಬಂದ ಕೂಡಲೇ ಮಾಡ್ತಿನಿ ಅಂತಾ ಹೇಳಿದ್ರು. ಆದರೆ ಯಡಿಯೂರಪ್ಪ ಆಶ್ವಾಸನೆ ಕೊಟ್ಟು, ಮಾತು ಕೊಟ್ಟರು, ಆದರೆ ಈಗ ಮಾತಿಗೆ ತಪ್ಪಿ ಮನೆಯಲ್ಲಿ ಕುಳಿತು ಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಸ್​​​ಟಿ ಸಮುದಾಯಕ್ಕೆ ಮೀಸಲಾತಿ ನೀಡ್ತಿವಿ ಅಂತಾ ಮಾತು ಕೊಟ್ಟು ಈಗಾ ಮನೆಯಲ್ಲಿ ಕುಳಿತು ಕೊಂಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿಗೆ ಎಲ್ಲಾ ಶಾಸಕರು ಹೇಳಬೇಕು, ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸಂವಿಧಾನಿಕ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಬೇಕು. ನಮ್ಮ ಸಮುದಾಯಕ್ಕೆ ಕಳೆದ 30 ವರ್ಷಗಳಿಂದ ಅನ್ಯಾಯ ಆಗುತ್ತಿದೆ. ಈಗ ವಾಲ್ಮೀಕಿ ಜಯಂತಿ ಬರುತ್ತದೆ, ರಾಣಿ ಚೆನ್ನಮ್ಮ ಜಯಂತಿ ಬರುತ್ತದೆ, ಬಸವಣ್ಣ ಜಯಂತಿ ಹೀಗೆ ಎಲ್ಲಾ ಸಮುದಾಯದ ಜಯಂತಿ ಬರುತ್ತದೆ. ಸರ್ಕಾರ ಕಾಟಾಚಾರದ ಜಯಂತಿ ಯಾಕೆ ಮಾಡುತ್ತೀರಿ? ಸಮುದಾಯದ ಮೇಲೆ ಕಳಕಳಿ, ಕಾಳಜಿ ಇಲ್ಲದಿದ್ದರೆ ಜಯಂತಿ ಯಾಕೆ ಮಾಡ್ತೀರಿ?

ಅಕ್ಟೋಬರ್ 20 ರಂದು ವಾಲ್ಮೀಕಿ ಜಯಂತಿಯಂದು ಸಿಎಂ ಬಸವರಾಜ್ ಬೊಮ್ಮಾಯಿ , ಶಾಸಕರು ಶಪಥ ಮಾಡಬೇಕು. Sc/st ಸಮುದಾಯಕ್ಕೆ ಸಾಮಾಜಿಕ ,ಶೈಕ್ಷಣಿಕ ನ್ಯಾಯ ಕೊಡುವ ಪ್ರಮಾಣಿಕ ಪ್ರಯತ್ನ ಮಾಡ್ತೀವಿ ಅಂತ ಶಪಥ ಮಾಡಬೇಕು ಎಂದು ಸ್ವಾಮೀಜಿ ಸರ್ಕಾರಕ್ಕೆ ನೀಡಿದ್ರು.

News First Live Kannada

Leave a comment

Your email address will not be published. Required fields are marked *