ಕೇಂದ್ರ ಸರ್ಕಾರ ಸಾಧಕರಿಗೆ ಕೊಡಮಾಡುವ ಪದ್ಮ ಪ್ರಶಸ್ತಿಯನ್ನ ಕನ್ನಡದ ಹಿರಿಯ ನಟ ಅನಂತ್​ನಾಗ್ ಅವರಿಗೆ ನೀಡಬೇಕು ಎಂದು ಹಲವು ಅಭಿಮಾನಗಳು.. ಸಿನಿಮಾ ದಿಗ್ಗಜರು ಅಭಿಯಾನ ನಡೆಸುತ್ತಿದ್ದಾರೆ. ಈ ಮಧ್ಯೆ ನ್ಯೂಸ್​ಫಸ್ಟ್​ ಜೊತೆಗೆ ಮನಬಿಚ್ಚಿ ಮಾತನಾಡಿದ ಅನಂತ್​ನಾಗ್ ಭಾವುಕರಾಗಿ ಮಾತನಾಡಿದರು..

ನನ್ನ ಅಕ್ಕನ ಮದುವೆ ನಿಶ್ಚಯವಾಗಿತ್ತು.. ನಮ್ಮಪ್ಪ ಇದನ್ನದರೂ ಸರಿಯಾಗಿ ಮಾಡು ಅಂತ ಇನ್ವಿಟೇಶನ್ ಕಾರ್ಡ್​​ಗಳನ್ನ ಕೊಟ್ಟು ಮುಂಬೈನಲ್ಲಿ ಸಂಬಮಧಿಕರಿಗೆ ಹಂಚೋಕೆ ಹೇಳಿದ್ರು.. ಆಗ ಪ್ರಭಾಕರ್ ಮದೋರ್ ಅನ್ನೋರು.. ನೀನು ನೋಡೋಕೆ ಚೆನ್ನಾಗಿದ್ದೀಯ.. ಕೆಂಚ ಕೂಲು.. ಬೆಳ್ಳಗಿದ್ದೀಯ.. ನಾಟಕದಲ್ಲಿ ಪಾರ್ಟ್ ಮಾಡ್ತೀಯಾ ಅಂದ್ರು. ಮಾಡ್ತೀನಿ ಅಂದೆ.. ನಾನು ಶಾಲೆಯಲ್ಲಿದ್ದಾಗ ಸ್ಕಿಟ್ಸ್​ ಅಲ್ಲಿ ಪಾರ್ಟಿಸಿಪೇಟ್ ಮಾಡಿದ್ದೀನಿ ನೀವು ಟ್ರೈ ಮಾಡಿ ಎಂದೆ..

ಕೊಂಕಣಿಯಲ್ಲಿ ಚೈತನ್ಯ ಮಹಾಪ್ರಭು ಅವರ ಮೇಲೆ ನಾಟಕ ಇತ್ತು.. ನಾಟಕ ಬಹಳ ಯಶ್ವಿಯಾಯ್ತು.. ಎರಡನೇ ನಾಟಕದಲ್ಲಿ ಗೌತಮ ಬುದ್ಧನ ಪಾರ್ಟ್ ಮಾಡಿದೆ. ಆಗ ಕನ್ನಡದಿಂದ ನನಗೆ ನಾಟಕಕ್ಕೆ ಕರೆ ಬಂತು.. ಅಷ್ಟರಲ್ಲಿ ನಾನು ಆನಂದ್, ಅಶೋಕ್ ಎಂಬುವವರು ಸೇರಿ ನಾವೇ ನಾಟಕಗಳನ್ನ ಮಾಡಲು ಪ್ರಾರಂಭಿಸಿದ್ವಿ. ನಂತರ ಸಂಕಲ್ಪ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟೆ.

ಪದ್ಮಶ್ರೀ ವಿಚಾರವಾಗಿ ನಡೆಯುತ್ತಿರುವ ಅಭಿಯಾನದ ಕುರಿತು ಮಾತನಾಡಿ.. 27 ನೇ ವಯಸ್ಸಿಗೇ ನನಗೆ ಪದ್ಮಶ್ರೀ ಬರಬೇಕಿತ್ತು. ಈಗ ಅಭಿಯಾನ ನಡೆಯುತ್ತಿರುವುದನ್ನು ನೋಡಿ ನಾನು ಭಾವುಕನಾದೆ.. ಮಾತೆತ್ತಿದ್ರೆ ಕಣ್ಣೀರು ಬರುತ್ತಲ್ಲ ನಿನಗೆ ಅಂತ ನನ್ನನ್ನ ನಾನೇ ಕೇಳಿಕೊಂಡೆ.. ಈ ಅಭಿಯಾನದ ಮಹಾಪೂರ ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಹಾಗೂ ನನ್ನ ತಮ್ಮ ಶಂಕರ್​ನಾಗ್​ಗೆ ಬಂದಿದ್ದನ್ನು ನೋಡಿದ್ದೆ.. ಈಗ ನನಗೆ ಬರುತ್ತಿರುವುದನ್ನು ನೋಡಿ ಹೃದಯ ತುಂಬಿ ಬಂತು ಎಂದು ಅನಂತ್ ನಾಗ್ ಭಾವುಕರಾದರು.

The post ‘ಮಾತೆತ್ತಿದ್ರೆ ಕಣ್ಣೀರು ಬರುತ್ತಲ್ಲ ನಿನಗೆ’ ಅಂತ ನನ್ನನ್ನ ನಾನೇ ಕೇಳಿಕೊಂಡೆ..- ಅನಂತ್​ನಾಗ್ ಮನಸಿನ ಮಾತು appeared first on News First Kannada.

Source: newsfirstlive.com

Source link