ಬೆಂಗಳೂರು: ಬೆಡ್​ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಒಂದು ಸಮುದಾಯವನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಇಂದು ಸುದ್ದಿಗೋಷ್ಟಿ ನಡೆಸಿದರು..

ತೇಜಸ್ವಿ ಸೂರ್ಯ ಅವರನ್ನ ತರಾಟೆಗೆ ತೆಗೆದುಕೊಂಡ ಜಮೀರ್.. ಎಷ್ಟಂತ ಸಹಿಸಿಕೊಳ್ಳೋದು ಸ್ವಾಮಿ.. ಮಾತೆತ್ತಿದ್ರೆ ಪಂಚರ್ ಹಾಕೋರು ಅಂತೀರಾ..? ನಿಮ್ಮ ಪಂಚರ್ ಆದ್ರೆ ನಮ್ಮ ಹತ್ತಿರಾನೇ ಬರ್ಬೇಕು ಸ್ವಾಮಿ.. ಇಂಡಿಯಾ ಗೇಟ್​ ಮೇಲೆ ಸ್ವಾತಂತ್ರ್ಯ ಹೋರಾಟಗಾರರ ಹೆಸರುಬರೆದಿದ್ದಾರೆ ಅದನ್ನ ಓದಿ.. ಎಷ್ಟು ಜನ ನಮ್ಮ ಸಮುದಾಯದ ಜನರು ಹೋರಾಡಿದ್ದಾರೆ.

ರಾಜಕೀಯದಲ್ಲಿ ಜಾತಿ ಮಾಡುವವರು ದಯಮಾಡಿ ರಾಜಕೀಯಕ್ಕೆ ಬರಬೇಡಿ.. ಹಂಗೆ ಮಾಡುವುದಿದ್ದರೆ ಮನೆಯಲ್ಲಿ ಮಾಡಿಕೊಳ್ಳಿ.. ರಾಜಕೀಯದಲ್ಲಿ ಜನರು ನಿಮ್ಮನ್ನ ನಂಬಿಕೊಂಡಿರ್ತಾರೆ.. ಜಾತಿ ಮಾಡಿದ್ರೆ ದೇವರು ನಿಮ್ಮನ್ನ ಕ್ಷಮಿಸಲ್ಲ..

2020 ರಲ್ಲಿ ಎಲ್ಲಿ ಹೋಗಿದ್ರಿ.. ಕಾಣಲೇ ಇಲ್ವಲ್ರೀ ನೀವು.. ನಾವು ಶವಗಳನ್ನ ಎತ್ತಿದ್ದೀನಿ.. ನೀವು ಹೋಗಿ ಶವಗಳನ್ನ ಎತ್ತಿ ಎಂದು ಜಮೀರ್ ಕಿಡಿಕಾರಿದ್ದಾರೆ..

 

The post ಮಾತೆತ್ತಿದ್ರೆ ಪಂಚರ್ ಹಾಕೋರು ಅಂತೀರಾ.. ಜನ ಸಾಯ್ತಿದ್ದಾರೆ ಶವ ಎತ್ತಿ ಸ್ವಾಮಿ.. ಜಮೀರ್ ಕಿಡಿ appeared first on News First Kannada.

Source: newsfirstlive.com

Source link