ಬೆಂಗಳೂರು: ಜೆಸಿ ನಗರ ಮತ್ತು ಸಂಜಯನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಓರ್ವ ನೈಜೀರಿಯನ್​ ಪ್ರಜೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಗ್ರಾಂ ವೀಡ್​ ಆಯಿಲ್​, 1.1ಕೆಜಿ ಗಾಂಜಾ, 2.8 ಗ್ರಾಂ ಕೊಕೇನ್​ ಸೇರಿದಂತೆ 2 ಕಾರು, 2 ಲ್ಯಾಪ್​ಟಾಪ್​ಗಳನ್ನು ಜಪ್ತಿ ಮಾಡಿದ್ದಾರೆ.

​ನೈಜಿರಿಯನ್ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ಎಂಬಾತನೇ ಈ ಜಾಲದ ಕಿಂಗಪಿನ್ ಆಗಿದ್ದಾನೆ ಎನ್ನಲಾಗಿದೆ. ವಿದ್ಯಾಭ್ಯಾಸದ ವೀಸಾದಡಿಯಲ್ಲಿ ಬೆಂಗಳೂರಿಗೆ ಬಂದಿದ್ದ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಎನ್ನಲಾಗಿದೆ.

 

ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಹೋಟೆಲ್ ಬಿಸಿನೆಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ.  ಕಮ್ಮನಹಳ್ಳಿಯ ಪ್ರದೀಪ ಎಂಬಾತ ಈತನನ್ನು ಸೇರಿಕೊಂಡು ಡಾರ್ಕ್​ವೆಬ್ ಮತ್ತು ವಿಕ್ಕರ್ ಮೆಸೆಂಜರ್ ಮೂಲಕ ಡ್ರಗ್ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಕಾಲೇಜು ಯುವಕರನ್ನೇ ಟಾರ್ಗೆಟ್​ ​ ಮಾಡುತ್ತಿದ್ದ ಇವರು, ತನ್ನ ಕಾಲೇಜು ಮತ್ತು ಹತ್ತಿರದ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಅಷ್ಟೇ ಅಲ್ಲದೇ ಡ್ರಗ್​ ಪೆಡ್ಲರ್​ ಕೂಡ ಆಗಿದ್ದ ಈತ ನಗರದ ರೆಡ್ ಬಸ್ ಕಂಪನಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣದಡಿಯಲ್ಲಿ 10 ವಿದ್ಯಾರ್ಥಿಗಳನ್ನು ಸಹ ಕಸ್ಟಡಿಗೆ ತೆಗೆದುಕೊಂಡಿರುವ ಉತ್ತರ ವಿಭಾಗ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

The post ಮಾದಕ ವಸ್ತುಗಳ ಮಾರಾಟ- ಓರ್ವ ನೈಜೀರಿಯನ್​ ಪ್ರಜೆ ಸೇರಿ ಇಬ್ಬರ ಬಂಧನ appeared first on News First Kannada.

Source: newsfirstlive.com

Source link