ರಾಮನಗರ: ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್​ ಖರೀದಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಟ್ರ್ಯಾಕ್ಟರ್​ಗೆ ಸ್ವಾಗತ ನೀಡಲಾಯಿತು. ಈ ವೇಳೆ ಕುಮಾರಸ್ವಾಮಿ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು. ತಮ್ಮ ಕೃಷಿಭೂಮಿಯನ್ನು ಮಾದರಿ ತೋಟವನ್ನಾಗಿ ಪರಿವರ್ತಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೆಚ್ಚು ಆಸಕ್ತಿ ತೋರಿಸಿ ತೋಟದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ.

ಟ್ರ್ಯಾಕ್ಟರ್ ಖರೀದಿಸಿ, ಡ್ರೈವ್ ಮಾಡಿದ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ

 

 

The post ‘ಮಾದರಿ ತೋಟ’ ನಿರ್ಮಾಣದಲ್ಲಿ ಹೆಚ್​​ಡಿಕೆ; ಟ್ರ್ಯಾಕ್ಟರ್ ಓಡಿಸಿದ ಮಾಜಿ ಸಿಎಂ appeared first on News First Kannada.

Source: newsfirstlive.com

Source link