ರಾಯಚೂರು: ವೀಕೆಂಡ್ ಕರ್ಫ್ಯೂ ನಡುವೆ ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ಪೊಲೀಸರು ದರ್ಪ ತೋರಿರುವ ಘಟನೆ ನಗರದ ಚಂದ್ರ ಮೌಳೇಶ್ವರ ವೃತ್ತದ ಬಳಿ ನಡೆದಿದೆ.

ವ್ಯಾಪಾರಿಗಳು ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ಮಾನವೀಯತೆ ಮರೆತಂತೆ ನಡೆದುಕೊಂಡಿದ್ದಾರೆ. ಬಡ ರೈತರ ತರಕಾರಿಗಳನ್ನ ಚೆಲ್ಲಾಡಿ, ಕಾಲಿನಿಂದ ತುಳಿದು ವ್ಯಾಪಾರಿಗಳಿಗೆ ಲಠಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.ತಳ್ಳುವ ಬಂಡಿ ಹಾಗೂ ಬೀದಿ ಬದಿಯಲ್ಲಿ ನಡೆಯುತ್ತಿದ್ದ ವ್ಯಾಪಾರಿಗಳು ತರಕಾರಿ ವ್ಯಾಪಾರ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಪೊಲೀಸ್ ದರ್ಪ ತೋರಿದ್ದಾರೆ ಎನ್ನಲಾಗಿದೆ.

ವ್ಯಾಪಾರಿಗಳಿಗೆ ಕೊರೊನಾ ಬಗ್ಗೆ ಹಾಗೂ ವ್ಯಾಪಾರ ನಿರ್ಬಂಧದ ಬಗ್ಗೆ ತಿಳಿಹೇಳಬಹುದಿತ್ತು. ಆದ್ರೆ ಪೊಲೀಸರು ಬಡವರು ಮಾರಾಟಕ್ಕೆಂದು ತಂದಿದ್ದ ತರಕಾರಿಗಳನ್ನ ತುಳಿದು ದರ್ಪ ಮೆರೆದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಮಾನವೀಯತೆ ಮರೆತ ಪೊಲೀಸ್; ಬಡ ವ್ಯಾಪಾರಿಗಳ ತರಕಾರಿಯನ್ನ ಕಾಲಿನಿಂದ ಒದ್ದು ದರ್ಪ appeared first on News First Kannada.

Source: newsfirstlive.com

Source link