ಸಾಮಾನ್ಯವಾಗಿ ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಕಟ್ಟೆ ಇರುತ್ತದೆ. ತುಳಸಿ ಗಿಡವನ್ನು ಪೂಜನೀಯ ಭಾವದಿಮದ ನೋಡಲಾಗುತ್ತದೆ. ತುಳಸಿ ಹಿಂದೂ ಧರ್ಮದವರ ಪಾಲಿಗೆ ದೇವರು ..  ಆಯುರ್ವೇದದಲ್ಲೂ  ತುಳಸಿಗೆ ಸಾಕಷ್ಟು ಮಹತ್ವ ಇದೆ. ಪ್ರತಿದಿನ ಬೆಳಿಗ್ಗೆ ಎದ್ದು ತುಳಸಿ ರಸ ಸೇವಿಸಿದರೆ, ಆರೋಗ್ಯಕ್ಕೆ ಪ್ರಯೋಜನ ಎನ್ನುವುದರಲ್ಲಿ ಯಾವುದೇ ಅನುಮಾನ ಪಡಬೇಕಾಗಿಲ್ಲ.

ತುಳಸಿ ನೀರು ನಮ್ಮ ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ :

ತುಳಸಿಯಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನುಗಳಿವೆ. ಅದು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ತುಳಸಿ ನೀರು ಕುಡಿಯುವುದರಿಂದ ಟೆನ್ಶನ್ ಮತ್ತು ಖಿನ್ನತೆ ಕಡಿಮೆಯಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: 

ತುಳಸಿ ನೀರನ್ನು ಕುಡಿದರೆ  ದೇಹದ ಚಯಾಪಚಯ ಕ್ರಿಯೆ ಪ್ರಬಲವಾಗುತ್ತದೆ. ಇದರಿಂದ  ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.  ಇದು ದೇಹದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅಂದರೆ, ಮಧುಮೇಹಿಗಳಿಗೆ ತುಳಸಿ ರಸ ಬಹಳ ಉತ್ತಮ.

ಅಸ್ತಮಾ ಕಾಯಿಲೆಗೆ ತುಳಸಿ ರಾಮಬಾಣ :

ತುಳಸಿ ನೀರು ಅಸ್ತಮಾ, ಉಸಿರಾಟದ ತೊಂದರೆ ಮತ್ತು  ಶೀತದಂತಹ ಕಾಯಿಲೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ತುಳಸಿ ಎಕ್ಸ್‌ಪೆಕ್ಟೊರೆಂಟ್, ಆಂಟಿಟಸ್ಸಿವ್ ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಆಸ್ತಮಾದಂತಹ ರೋಗವನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ತುಳಸಿಯ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.

ಜೀರ್ಣಕ್ರಿಯೆಗೆ ತುಳಸಿ ಉತ್ತಮ :

ಬಹು ಉಪಯೋಗ್ಯವಾದ ತುಳಸಿ ಜೀರ್ಣಕ್ರಿಯೆಗೆ ತುಂಬಾ ಸಿದ್ಧೌಷಧ. ತುಳಸಿ ಮಲಬದ್ಧತೆ ನಿವಾರಿಸುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಬೆಳಗ್ಗೆ ಎದ್ದು ಒಂದು ಲೋಟಕ್ಕೆ ಸ್ವಲ್ಪ ತುಳಸಿ ರಸ ಸೇರಿಸಿ ಕುಡಿದರೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

ದೇಹದ ಶಕ್ತಿ ವರ್ಧಕ :

ಇನ್ನು ತುಳಸಿ ರಸ ದೇಹಕ್ಕೆ ಶಕ್ತಿ ತುಂಬುತ್ತದೆ.  ಸೋಮಾರಿತನ,  ಒತ್ತಡ ನಿವಾರಿಸುತ್ತದೆ. ದೇಹದ ವಿಕ್ನೆಸ್ ಕಡಿಮೆಗೊಳಿಸುವಲ್ಲಿ ತುಳಸಿ ಬಹಳ ಕೆಲಸ ಮಾಡುತ್ತದೆ.

ಆರೋಗ್ಯ – Udayavani – ಉದಯವಾಣಿ
Read More