ನವದೆಹಲಿ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲೆಪ್​ಮೆಂಟ್ ಆರ್ಗನೈಸೇಷನ್(DRDO) ಅಭಿವೃದ್ಧಿಪಡಿಸಿರುವ 2DG (2-deoxy-D-glucose) ಔಷಧಿಯ ಬಿಡುಗಡೆ ಬಗ್ಗೆ ಇಂದು ಡಾ. ರೆಡ್ಡೀಸ್ ಲ್ಯಾಬ್ ಘೋಷಣೆ ಮಾಡಿದೆ. ಜೂನ್ 1 ರಂದು ಆ್ಯಂಟಿ ಕೋವಿಡ್ ಔಷಧಿಯಾಗಿರುವ 2DG ಗೆ ತುರ್ತು ಬಳಕೆಗೆ ಅನುಮತಿ ಸಿಕ್ಕಿತ್ತು.

2DG ಔಷಧಿಯನ್ನು ವೈದ್ಯರು ಸೋಂಕಿನಿಂದ ಮಧ್ಯಮ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸುತ್ತಿರುವ ಸೋಂಕಿತರಿಗೆ ಮೊದಲ 10 ದಿನಗಳ ಒಳಗಾಗಿ ನೀಡಬಹುದು ಎಂದು ಹೇಳಲಾಗಿದೆ. ಮುಂದುವರೆದು ಅನಿಯಂತ್ರಿತ ಡಯಾಬಿಟೀಸ್ ಇರುವವರಿಗೆ, ಗಂಭೀರ ಹೃದಯ ಸಮಸ್ಯೆ ಇರುವವರಿಗೆ ಹಾಗೂ ಎಆರ್​ಡಿಎಸ್, ಹಾಗೂ ದುರ್ಬಲ ಯಕೃತ್ತು, ಮೂತ್ರಪಿಂಡ ಸಮಸ್ಯೆ ಇರುವವರ ಮೇಲೆ 2 ಡಿಜಿ ಹೇಗೆ ಪರಿಣಾಮ ಬೀರಲಿದೆ ಎಂದು ಈವರೆಗೆ ಪ್ರಯೋಗ ನಡೆಸಿಲ್ಲ ಎಂದು ಡಿಆರ್​ಡಿಓ ಸ್ಪಷ್ಟಪಡಿಸಿದೆ. ಹಾಗೂ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಮಹಿಳೆಯರು ಅಲ್ಲದೇ 18 ವರ್ಷ ಒಳಗಿನವರಿಗೆ 2ಡಿಜಿ ಔಷಧಿ ಸೂಕ್ತವಲ್ಲ ಎಂದು ಡಿಆರ್​ಡಿಓ ಹೇಳಿದೆ.

ಮೊದಲ ಬ್ಯಾಚ್​ನ ಡಿಆರ್​ಡಿಓದ ಆ್ಯಂಟಿ ಕೋವಿಡ್​ ಡ್ರಗ್​ನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಬಿಡುಗಡೆ ಮಾಡಿದ್ದರು. 2 ಡಿಜಿ ಡ್ರಗ್ ಸ್ಯಾಚೆಟ್​ಗಳಲ್ಲಿ ಪೌಡರ್​ ರೂಪದಲ್ಲಿ ಲಭ್ಯವಾಗಲಿದ್ದು ಇದನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಇದು ವೈರಸ್​ ಸೋಂಕಿಗೆ ಒಳಗಾದ ಸೆಲ್​ಗಳನ್ನು ರಾಶಿ ಮಾಡಿ ವೈರಲ್ ಸಿಂಥೆಸಿಸ್ ಮತ್ತು ಎನರ್ಜಿ ಪ್ರೊಡಕ್ಷನ್ ಮೂಲಕ ವೈರಸ್ ಬೆಳೆಯುವುದನ್ನ ತಡೆಯುತ್ತದೆ. ಈ ಡ್ರಗ್ ಬಳಸಿದವರು ಎರಡರಿಂದ ಎರಡೂವರೆ ದಿನಗಳ ಕಡಿಮೆ ಸಮಯದಲ್ಲಿ ಸೋಂಕಿತರನ್ನ ಗುಣಪಡಿಸುತ್ತದೆ ಮತ್ತು ಆಕ್ಸಿಜನ್ ಬೇಡಿಕೆಯನ್ನ 40 ಪರ್ಸೆಂಟ್ ಕಡಿಮೆಯಾಗಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಹಿಂದೆ ಹೇಳಿಕೆ ನೀಡಿದ್ದಾರೆ.

The post ಮಾರುಕಟ್ಟೆಗೆ ರಾಮಬಾಣ; ಕೊರೊನಾ ವಿರುದ್ಧ ಯುದ್ಧಕ್ಕಾಗಿ ಜನ ಸಾಮಾನ್ಯರಿಗೂ ಸಿಗಲಿದೆ 2DG appeared first on News First Kannada.

Source: newsfirstlive.com

Source link