ಮುಂಬಯಿ: ಐಪಿಎಲ್‌ನಲ್ಲಿ ಸತತ ಎರಡನೇ ದಿನ “ದಂಡ’ ಪ್ರಯೋಗ ನಡೆದಿದೆ. ಬುಧವಾರ ಇದಕ್ಕೆ ಸಿಲುಕಿದವರು ಕೆಕೆಆರ್‌ ನಾಯಕ ಇಯಾನ್‌ ಮಾರ್ಗನ್‌. ಚೆನ್ನೈಎದುರಿನ ಪಂದ್ಯದಲ್ಲಿ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲವಾದ ಕಾರಣ ಐಪಿಎಲ್‌ ನಿಯಮಾವಳಿಯಂತೆ ಮಾರ್ಗನ್‌ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು.

ಇದರಿಂದ ಪ್ರಸಕ್ತ ಋತುವಿನಲ್ಲಿ ಮೂವರು ನಾಯಕರಿಗೆ ದಂಡದ ಬರೆ ಬಿದ್ದಂತಾಯಿತು. ಉಳಿದಿಬ್ಬರೆಂದರೆ ಮಹೇಂದ್ರ ಸಿಂಗ್‌ ಧೋನಿ ಮತ್ತು ರೋಹಿತ್‌ ಶರ್ಮ. ಎರಡನೇ ಸಲ ಈ ನಾಯಕರಿಂದ ಈ ತಪ್ಪು ಪುನರಾವರ್ತನೆಗೊಂಡರೆ ದಂಡದ ಮೊತ್ತ ದ್ವಿಗುಣಗೊಳ್ಳಲಿದೆ (24 ಲಕ್ಷ ರೂ.). ಜತೆಗೆ ತಂಡದ ಎಲ್ಲ ಸದಸ್ಯರಿಗೂ ದಂಡದ ಬಿಸಿ ಮುಟ್ಟಲಿದೆ. 6 ಲಕ್ಷ ರೂ. ಜುಲ್ಮಾನೆ ಅಥವಾ ಇವರೆಲ್ಲರ ಪಂದ್ಯದ ಸಂಭಾವನೆಯ ಶೇ. 25ರಷ್ಟು ಮೊತ್ತ ಕಡಿತ, ಯಾವುದು ಕಡಿಮೆಯೋ ಅದನ್ನು ದಂಡದ ರೂಪದಲ್ಲಿ ತೆರಬೇಕಾಗುತ್ತದೆ.

ಕ್ರೀಡೆ – Udayavani – ಉದಯವಾಣಿ
Read More