ಮಾರ್ಗ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ.. ಬಸ್​ ಓಡಿಸಿ ಪ್ರಯಾಣಿಕರನ್ನು ರಕ್ಷಿಸಿದ ಗಟ್ಟಿಗಿತ್ತಿ..!


ಪುಣೆ : ಚಲಿಸುತ್ತಿದ್ದ ಮಿನಿ ಬಸ್‌ ಚಾಲಕನಿಗೆ ಫಿಟ್ಸ್‌ ಬಂದ ಹಿನ್ನೆಲೆ ಮಹಿಳಾ ಪ್ರಾಯಾಣಿಕರೊಬ್ಬರು ಸ್ವತಃ ತಾವೇ ಬಸ್​​ನ್ನು ಚಾಲನೆ ಮಾಡಿ ಪ್ರಯಾಣಿಕರನ್ನು ಪಾರು ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.

ಜನವರಿ 7 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪುಣೆ ಬಳಿಯ ಶೀರೂರು ಮೂಲದ ಯೋಗಿತಾ ಸತಾವ್​ ಎಂಬ ಮಹಿಳೆ ತನ್ನ ಕುಟುಂಬದೊಂದಿಗೆ ಈ ಬಸ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಇವರು ಸೇರಿ ಬಸ್​ನಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ದರು. ಮಾರ್ಗ ಮಧ್ಯೆ ಬಸ್​ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಅನಾರೋಗ್ಯ ಎದುರಾಗಿ ಕುಸಿದು ಬಿದ್ದಿದ್ದಾನೆ. ಪರಿಣಾಮ ಬಸ್​ ನಿಯಂತ್ರಣ ಕಳೆದುಕೊಂಡಿದೆ.

ಇದನ್ನು ಗಮನಿಸಿದ ಮಹಿಳೆ ದಿಢೀರ್​ನೆ ಚಾಲಕನನ್ನು ಬದಿಗೆ ಸರಿಸಿ ಡ್ರೈವ್​ ಮಾಡಿ ಬಸ್​ನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ. ಆ ಬಳಿಕ ಮೊದಲು ಆಸ್ಪತ್ರೆಗೆ ಬಸ್​ನ್ನು ಚಲಾಯಿಸಿ  ಚಾಲಕನಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.

ಇನ್ನು ಘಟನೆಯ ನಂತರ ಮಾತನಾಡಿದ ಅವರು ನನಗೆ ಕಾರ್​ ಓಡಿಸುವುದು ಗೊತ್ತು. ಹೀಗಾಗಿ ನಾನು ಯಾವುದೇ ಭಯವಿಲ್ಲದೆ ಬಸ್​ನ್ನು ಚಲಾಯಿಸಿದೆ. ಮತ್ತು ಈ ಸಂದರ್ಭದಲ್ಲಿ ಚಾಲಕನಿಗೆ ಚಿಕಿತ್ಸೆ ಕೊಡಿಸುವುದು ನನ್ನ ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಅಲ್ಲಿಂದ ಬಸ್​ನ್ನು ನೇರವಾಗಿ ಆಸ್ಪತ್ರೆಗೆ ಕರೆತಂದೆ ಎಂದಿದ್ದಾರೆ. ಇನ್ನು ಈ ಗಟ್ಟಿಗಿತ್ತಿ ಚಾಲನೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದು ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *