ಮಾರ್ಚ್​ನಿಂದ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ; ಆರೋಗ್ಯ ತಜ್ಞ ಎನ್​.ಕೆ.ಅರೋರಾ ಮಾಹಿತಿ | India to begin Covid 19 vaccinating 12 14 year olds By March Says NK Arora


ಮಾರ್ಚ್​ನಿಂದ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ; ಆರೋಗ್ಯ ತಜ್ಞ ಎನ್​.ಕೆ.ಅರೋರಾ ಮಾಹಿತಿ

ಸಾಂಕೇತಿಕ ಚಿತ್ರ

ಭಾರತದಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮತ್ತು 15-18 ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಮಧ್ಯೆ  ಆರೋಗ್ಯ ತಜ್ಞ ಡಾ. ಎನ್​.ಕೆ.ಅರೋರಾ ಇನ್ನೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.  ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಕೊವಿಡ್​ 19 ಕಾರ್ಯಕಾರಿ ಗುಂಪಿನ ಪ್ರತಿರಕ್ಷಣಾ ವಿಭಾಗದ ಅಧ್ಯಕ್ಷರೂ ಆಗಿರುವ ಎನ್​. ಕೆ.ಅರೋರಾ, ಮಾರ್ಚ್​ ತಿಂಗಳಿನಿಂದ ದೇಶದಲ್ಲಿ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ. ಭಾರತದಲ್ಲಿ 15-18ವರ್ಷದವರಿಗೆ ಜನವರಿ 3ರಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ವಯಸ್ಸಿನವರಿಗೆ ಈಗಾಗಲೇ 3 ಕೋಟಿ ಗೂ ಅಧಿಕ ಡೋಸ್ ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *