ಮಾರ್ಚ್​​​ ವೇಳೆಗೆ ಗುಡ್​ ನ್ಯೂಸ್​ ಕೊಡ್ತೀನಿ ಅಂದ್ರು ನಟಿ ರಮ್ಯಾ.. ಏನದು?


ಮೋಹಕ ತಾರೆ ರಮ್ಯಾ ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕೆಲವು ವರ್ಷಗಳಿಂದ  ರಾಜಕೀಯದಿಂದಲೂ ದೂರ ಇರುವ ರಮ್ಯಾ ಈಗ ಸಿಹಿಸುದ್ದಿ ನೀಡುವುದಾಗಿ ಹೇಳಿದ್ದಾರೆ.

 ರಮ್ಯಾ ಕೊಡೊ ಸಿಹಿಸುದ್ದಿ ಏನು..?

ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಅಂದ್ರೂ, ಸ್ಯಾಂಡಲ್​ವುಡ್​ನಲ್ಲಿ ಅವರ ಹವಾ ಏನು ಕಡಿಮೆ ಆಗಿಲ್ಲ. ಈಗಲೂ ಎಷ್ಟೋ ಅಭಿಮಾನಿಗಳು ಆಕೆಯ ನಟನೆಯನ್ನು ಕಣ್ತುಂಬಿಕೊಳ್ಳೊಕೆ ಕಾದು ಕುಳಿತಿದ್ದಾರೆ. ಬಹಳ ದಿನಗಳಿಂದ ಮಾಧ್ಯಮಗಳ ಕಣ್ಣಿಂದ ದೂರ ಉಳಿದಿದ್ದ ರಮ್ಯಾ, ಇತ್ತೀಚಿಗಷ್ಟೇ ಲಾರಾ ಎಂಬ ಶ್ವಾನದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರೂ. ಹೇಳಿ ಕೇಳಿ ರಮ್ಯಾ ಪ್ರಾಣಿಪ್ರಿಯೆ. ಹೀಗಿರುವಾಗ, ವ್ಯಕ್ತಿಯೊಬ್ಬ ನಿರ್ದಯಿಯಾಗಿ ಮಲಗಿದ್ದ ಶ್ವಾನದ ಮೇಲೆ ಕಾರನ್ನು ಹತ್ತಿಸಿ ಸಾಯುವಂತೆ ಮಾಡಿದ್ದ. ಈ ಘಟನೆಯಿಂದ ಬೇಸರಗೊಂಡಿದ್ದ ರಮ್ಯಾ ನ್ಯೂಸ್​ಫಸ್ಟ್​ ಜತೆ ಮಾತನಾಡಿ ಘಟನೆಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ರಮ್ಯಾ ಮಾರ್ಚ್​​ನಲ್ಲಿ ಶುಭಸುದ್ದಿ ನೀಡುವುದಾಗಿ ತಿಳಿಸಿದ್ದಾರೆ. ಏನಿರಬಹುದು ಶುಭಸುದ್ದಿ ಎಂದು ಯೋಚಿಸಲು ಪ್ರಾರಂಭಿಸಿದಾಗ ಸಿಕ್ಕ ಉತ್ತರ, ರಮ್ಯಾ ಸಿನಿಮಾರಂಗಕ್ಕೆ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ ಎನ್ನುವುದು.

ಹೌದು, ಇನ್ನು ಸ್ಯಾಂಡಲ್​ವುಡ್​ನಲ್ಲಿ ರಮ್ಯಾ ಡಿಮ್ಯಾಂಡ್​ ಹೆಚ್ಚಾಗಿಯೇ ಇದೆ. ಹೀಗಾಗಿ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವ ಸಾಧ್ಯತೆಗಳು ಅಧಿಕ. ರಮ್ಯಾ ಕಮ್​ಬ್ಯಾಕ್​ ಮಾಡ್ತಾರಾ ಇಲ್ವಾ ಅನ್ನೊದಕ್ಕೆ ನಿಖರವಾದ ಉತ್ತರ ಸಿಗೋದು ಮಾರ್ಚ್​ ತಿಂಗಳಲ್ಲಿಯೇ ಅಲ್ಲಿವರೆಗೆ ಕಾದು ನೋಡಬೇಕಿದೆ.

News First Live Kannada


Leave a Reply

Your email address will not be published.