‘ಮಾರ್ವೆಲ್ ಸಿನೆಮಾ ನೋಡುತ್ತಿರುವ ಈ ಅಜ್ಜಿಯನ್ನು ನಾವೆಲ್ಲಾ ಸೇರಿ ಕಾಪಾಡಬೇಕಿದೆ’ – Viral video shows an elderly woman watching Marvel movies The reason will make you smile


Marvel Movies : ಹಣ್ಣಣ್ಣು ಈ ಅಜ್ಜಿ ಮಕ್ಕಳು ನೋಡುವ ಸಿನೆಮಾಗಳನ್ನು ನೋಡುತ್ತ ನೋಟ್ಸ್​ ಮಾಡಿಕೊಳ್ಳುವ ಖಯಾಲಿಗೆ ಬಿದ್ದಿದ್ದಾರೆ. ನೆಟ್ಟಿಗರೆಲ್ಲಾ ತಮಾಷೆ ಮಾಡುತ್ತಿದ್ದಾರೆ. ಇದು ಯಾಕಿರಬಹುದು ಯೋಚಿಸಿ, ವಿಡಿಯೋ ನೋಡುತ್ತಾ….

‘ಮಾರ್ವೆಲ್ ಸಿನೆಮಾ ನೋಡುತ್ತಿರುವ ಈ ಅಜ್ಜಿಯನ್ನು ನಾವೆಲ್ಲಾ ಸೇರಿ ಕಾಪಾಡಬೇಕಿದೆ’

Viral video shows an elderly woman watching Marvel movies

Viral : ಯಾವ ಯಾವ ವಯಸ್ಸಿನಲ್ಲಿ ಯಾರ್ಯಾರಿಗೆ ಎಂಥ ಸಿನೆಮಾಗಳು ಬೇಕೋ ಅಂಥವುಗಳನ್ನು ನೋಡುವುದು ಸಾಮಾನ್ಯ. ಆದರೆ ಹಣ್ಣಣ್ಣು ಅಜ್ಜಿಯೊಬ್ಬಳು ಮಾರ್ವೆಲ್​ ಸಿನೆಮಾಗಳ ಹುಚ್ಚು ಹಿಡಿಸಿಕೊಂಡಿದ್ದು ಯಾಕೆ? ಓದಿ ನಿಮಗೂ ಅಚ್ಚರಿಯಾಗುತ್ತಿದೆಯಾ? ನೆಟ್ಟಿಗರಿಗೂ ನಗು ಮತ್ತು ಕುತೂಹಲ ತಡೆಯಲಾಗುತ್ತಿಲ್ಲ. ಈಕೆ ಈ ಸಿನೆಮಾಗಳನ್ನು ನೋಡುತ್ತಿರುವುದಷ್ಟೇ ಅಲ್ಲ ನೋಟ್​ ಕೂಡ ಮಾಡಿಕೊಳ್ಳುತ್ತಿದ್ದಾಳೆ. ನಂತರ ತನ್ನ ಮೊಮ್ಮಕ್ಕಳೊಂದಿಗೆ ಈ ಕುರಿತು ಚರ್ಚಿಸುವ ಇರಾದೆ ಆಕೆಯದು. ನೋಡಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಏಕೆಂದರೆ Gen Z ಅಂದರೆ ಈಗಿನ ಪೀಳಿಗೆಯ ಮಕ್ಕಳು ಮಾರ್ವೆಲ್​ ಸೀರೀಸ್​ನ ಭಯಂಕರ ಅಭಿಮಾನಿಗಳು. ಅಪ್ಪಟ ಮನರಂಜನೆ, ಸಾಹಸಪ್ರಧಾನ​ ವಿಷಯಗಳನ್ನು ಈ ಸಿನೆಮಾಗಳು ಹೊಂದಿರುತ್ತವೆ. ಆದರೆ ಇಂಥ ಸಿನೆಮಾಗಳನ್ನು ಅಜ್ಜಿ ಯಾಕೆ ಇಷ್ಟೊಂದು ತನ್ಮಯರಾಗಿ ನೋಡಲು ಶುರು ಮಾಡಿದ್ದಾರೆ ಎನ್ನುವುದೇ ಪ್ರಶ್ನೆ.

ಈತನಕ 4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಎಂಥಾ ಮುದ್ದಾದ ಅಜ್ಜಿ ಇವರು, ನೋಟ್ಸ್​ ಕೂಡ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ವಯಸ್ಸಾದಂತೆ ಜಗತ್ತಿನಿಂದ ದೂರವಾಗುತ್ತಿದ್ದೇನೆ ಎಂಬ ಆತಂಕ, ಭಯ ಕಾಡುವುದು ಸಾಮಾನ್ಯ. ಜಗತ್ತಷ್ಟೇ ಅಲ್ಲ, ತನ್ನ ಸುತ್ತಮುತ್ತಲಿನವರೊಂದಿಗೆ, ಸ್ವಂತದವರೊಂದಿಗೆ ಕೂಡ. ಆಗ ಗೊಣಗಾಟ, ಕೋಪ, ಕಿರಿಕಿರಿ ಮತ್ತು ಮೌನದೊಂದಿಗೆ ವಯಸ್ಸಾದವರು ಆಗಾಗ ತಮ್ಮ ಅಸಹಾಯಕತೆ, ನೋವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಈ ಅಜ್ಜಿ ಹಾಗೆಲ್ಲ ಮಾಡದೆ, ಎಳೆಯರೊಂದಿಗೆ ಮನಸ್ಸು, ಆಲೋಚನೆಯನ್ನು ಜೋಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಹೀಗಾದರೂ ಮೊಮ್ಮಕ್ಕಳೊಂದಿಗೆ ಮಾತನಾಡಬಹುದಲ್ಲ ಎಂಬ ಆಸೆ ಇರಬಹುದು. ಇದರಲ್ಲಿ ನಗುವ ವಿಷಯ ಏನೂ ಇಲ್ಲ. ಇದು ಹೃದಯಕ್ಕೆ ಸಂಬಂಧಿಸಿದ್ದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.