ಮಾಲಾಶ್ರೀ ಅವರು ನನಗೆ ಸ್ಫೂರ್ತಿ; ಪ್ರಿಯಾಂಕಾ ಉಪೇಂದ್ರ | Malashree Is Inspire for me Says Priyanaka Upendra


ನಟಿ ಮಾಲಾಶ್ರೀ ಅವರು ಕನ್ನಡದಲ್ಲಿ ಹಲವು ಮಾಸ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜತೆಗೆ ಪೊಲೀಸ್​ ಅಧಿಕಾರಿ ಪಾತ್ರದಲ್ಲೂ ಅವರು ಮಿಂಚಿದ್ದರು. ಅವರು ಅನೇಕರಿಗೆ ಸ್ಫೂರ್ತಿ. ಈಗ ‘ಉಗ್ರಾವತಾರ’ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಮಾಲಾಶ್ರೀ ಅವರೇ ಸ್ಫೂರ್ತಿ. ಈ ಬಗ್ಗೆ ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಏನೆಲ್ಲ ಅಂದ್ರು ಅನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಈ ಚಿತ್ರಕ್ಕೆ ಗುರುಮೂರ್ತಿ ನಿರ್ದೇಶನವಿದೆ. ತಾರಾಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮುಂತಾದವರು ಇದ್ದಾರೆ.  ನಂದಕುಮಾರ್ ಛಾಯಾಗ್ರಹಣ, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋದ್​-ಮಾಸ್‌ಮಾದ-ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್​ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್​ ಮಾಡೋ ಆಲೋಚನೆ ಚಿತ್ರತಂಡದ್ದು.

TV9 Kannada


Leave a Reply

Your email address will not be published. Required fields are marked *