ಮಾಲಿನ್ಯದಿಂದ ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯ ರಕ್ಷಣೆ ಹೇಗೆಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ಸಲಹೆಗಳು | How to protect your hair and skin health check in kannada


ಮಾಲಿನ್ಯದಿಂದ ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯ ರಕ್ಷಣೆ ಹೇಗೆಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ಸಲಹೆಗಳು

ಸಂಗ್ರಹ ಚಿತ್ರ

ಮಾಲಿನ್ಯದಿಂದ ನಿಮಗೆ ಚರ್ಮದ ಅಲರ್ಜಿ ಸಮಸ್ಯೆ ಕಾಡುತ್ತಿರಬಹುದು. ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರಬಹುದು. ಹೀಗಿರುವಾಗ ಚರ್ಮ ಮತ್ತು ಕೂದಲಿನ ಆರೈಕೆಗೆ ಅದೆಷ್ಟೋ ಔಷಧಿಗಳನ್ನು ಬಳಸುತ್ತಿರುತ್ತೀರಿ. ಆದರೆ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೈಕೆಗೆ ಈ ಕೆಲವು ಸಲಹೆಗಳನ್ನು ಪಾಲಿಸಿ. ಇದರಿಂದ ನೀವು ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಹಾರದಲ್ಲಿ ಅಪೌಷ್ಟಿಕತೆ ಮತ್ತು ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿರಬಹುದು. ಅದರಲ್ಲಿಯೂ ಮುಖ್ಯವಾಗಿ ಚಳಿಗಾಲದ ಸಮಯದಲ್ಲಿ ನಿಮ್ಮ ಆರೋಗ್ಯ ಕಾಳಜಿಗೆ ನೀವು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.

ವಾಹನಗಳಿಂದ ಹೊರಬರುವ ವಿಷಕಾರಕ ಹೊಗೆ, ಕಾರ್ಖಾನೆಗಳಿಂದ ಹರಬರುವ ಅನಿಲ, ಸಿಗರೇಟ್ ಹೊಗೆ ಇವುಗಳು ನಿಮ್ಮ ಸುಂದರವಾರ ತ್ವಚೆಯನ್ನು ಹಾನಿಗೊಳಗಾಗಿಸಬಹುದು. ಹಾಗಿರುವಾಗ ಆರೋಗ್ಯ ಸುಧಾರಣೆಗೆ ಕೆಲವು ಟಿಪ್ಸ್​ಗಳು ಈ ಕೆಳಗಿನಂತಿವೆ. ಇವುಗಳನ್ನು ನೀವು ಪಾಲಿಸುವ ಮೂಲಕ ಚರ್ಮ ಮತ್ತು ಆರೋಗ್ಯಕರ ಕೂದಲಿನ ಆರೈಕೆ ಮಾಡಬಹುದಾಗಿದೆ.

ಹೊಗೆ, ಧೂಳು, ವಿಷಕಾರಿ ಅನಿಲ, ಇವುಗಳಿಂದ ಚರ್ಮದ ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಇದರಿಂದ ಕೂದಲು ಉದುರುವ ಸಮಸ್ಯೆಗಳು ಕಂಡುಬರುತ್ತವೆ. ಹೀಗಿರುವಾಗ ನೀವು ಹೊಳೆಯುವ ಕೂದಲು ಮತ್ತು ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ಕೆಲವು ಮಾರ್ಗಗಳನ್ನು ಅನುಸರಿಸಿ.

ಚರ್ಮದ ಆರೈಕೆಗೆ ಸಲಹೆಗಳು
ಸನ್​ಸ್ಕ್ರೀನ್​ ಬಳಸಿ
ನಿಮ್ಮ ಚರ್ಮದ ಆರೈಕೆಗೆ ಸನ್​ಸ್ಕ್ರೀನ್​ ಉತ್ತಮ ಆಯ್ಕೆ. ಸನ್​ಸ್ಕ್ರೀನ್​ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮಾಲಿನ್ಯದಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ. ಮಾಲಿನ್ಯಕ್ಕೆ ಕಾರಣವಾಗುವ ವಿಷಕಾರಿ ಅನಿಲಗಳು, ಹೊಗೆ ಇವುಗಳಿಂದ ನಿಮ್ಮ ಆರೋಗ್ಯ ಹಾನಿಗೊಳಗಾಗುತ್ತದೆ. ಚರ್ಮದ ಸಮಸ್ಯೆಯಿಂದ ರಕ್ಷಣೆ ಪಡೆಯಲು ನೀವು ಸನ್​ಸ್ಕ್ರೀನ್​ ಬಳಸುವುದು ಒಳ್ಳೆಯದು.

ಮುಖ ತೊಳೆಯಿರಿ
ಹೊರಗಡೆ ತಿರುಗಾಡಿ ಬಂದ ತಕ್ಷಣ ಮುಖ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಮುಖವು ತಾಜಾತನದಿಂದ ಕೂಡಿರುವುದಲ್ಲದೇ ಧೂಳು, ಕೊಳಕು ಮತ್ತು ಮಾಲಿನ್ಯಕಾರಕಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಆರೋಗ್ಯಕರ ಚರ್ಮವನ್ನು ಪಡೆಯಲು ಈ ಅಭ್ಯಾಸವನ್ನು ಯಾವಾಗಲೂ ರೂಢಿಯಲ್ಲಿಟ್ಟುಕೊಳ್ಳಿ.

ವಾರಕ್ಕೊಮ್ಮೆ ಮಸಾಜ್ ಮಾಡಿ
ನಿಮ್ಮ ಚರ್ಮದ ಆರೈಕೆಗೆ ನೀವು ವಾರಕ್ಕೊಮ್ಮೆ ಮಸಾಜ್ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿದ ಬಳಿಕ ನೀವು ಸ್ನಾನ ಮಾಡಿ. ವಾರಕ್ಕೊಮ್ಮೆ ಈ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದರಿಂದ ನಿಮ್ಮ ಚರ್ಮದ ಆರೈಕೆ ಮಾಡಬಹುದಾಗಿದೆ.

ಕೂದಲು ಆರೈಕೆಗೆ ಸಲಹೆಗಳು
ಹೊರಗಡೆ ಹೋಗುವಾಗ ನಿಮ್ಮ ಮುಖವನ್ನು ಮತ್ತು ಕೂದಲನ್ನು ತೆಳುವಾದ ಬಟ್ಟೆಯಿಂದ ಮುಚ್ಚಿಕೊಳ್ಳಿ. ಚಳಿಗಾಲದ ಸಮಯದಲ್ಲಿ ಇದು ಉತ್ತಮ ಆಯ್ಕೆ. ಮಾಲಿನ್ಯದಿಂದ ನಿಮ್ಮ ಕೂದಲು ಮತ್ತು ಚರ್ಮದ ಆರೈಕೆ ಮಾಡಲು ಈ ಅಭ್ಯಾಸ ಒಳ್ಳೆಯದು.

ವಾರಕ್ಕೆ ಎರಡು ಬಾರಿಯಾದರೂ ತಲೆಸ್ನಾನ ಮಾಡಿ
ವಾರಕ್ಕೆ ಎರಡು ಬಾರಿಯಾದರೂ ತಲೆಸ್ನಾನ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಮಾಲಿನ್ಯದಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಮತ್ತು ಚರ್ಮದ ಅಲರ್ಜಿ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ತಲೆಸ್ನಾನದಿಂದ ನಿಮ್ಮ ಕೂದಲು ಸ್ವಚ್ಛವಾಗುವುದರಿಂದ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ ಇವುಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

TV9 Kannada


Leave a Reply

Your email address will not be published. Required fields are marked *