ಮಾಲ್ಡೀವ್ಸ್​ನಲ್ಲಿ ಐಶ್​ ದಂಪತಿ ತಂಗಿರೋ ರೆಸಾರ್ಟ್​ನ 1 ದಿನದ ಬಾಡಿಗೆ ಎಷ್ಟು ಗೊತ್ತಾ?


ಬಾಲಿವುಡ್​ನ ಸ್ಟಾರ್​ ದಪಂತಿಗಳಾದ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ರೈ ಬಚ್ಚನ್​ ತಮ್ಮ ಮಗಳು ಆರಾಧ್ಯ ಬಚ್ಚನ್​ ಅವರ 10 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಮಾಲ್ಡೀವ್ಸ್​ನ ಐಷಾರಾಮಿ ರೆಸಾರ್ಟ್‍ನ ವಿಲ್ಲಾದ ಒಂದು ದಿನದ ಬೆಲೆ 10 ಲಕ್ಷ ರೂ ಎನ್ನಲಾಗಿದೆ.

ಹೌದು ಅಭಿ ಐಶ್​ ಪುತ್ರಿ ಆರಾಧ್ಯಾಗೆ ಇದೇ ನವೆಂಬರ್​ 16ಕ್ಕೆ ಹತ್ತು ವರ್ಷಗಳು ತುಂಬುತ್ತಿದೆ. ಹೀಗಾಗಿ ಮಗಳ ಹುಟ್ಟು ಹಬ್ಬವನ್ನು ಆಚರಿಸಲು ಅಭಿ ,ಐಶ್​ ಮಾಲ್ಡೀವ್ಸ್​ಗೆ ಹರಿದ್ದಾರೆ.ಎರಡ್ಮೂರು ದಿನಗಳ ಹಿಂದೆಯಷ್ಟೇ ಅಭಿ ,ಐಶ್​ ಹಾಗೂ ಆರಾಧ್ಯ ಮಾಲ್ಡೀವ್ಸ್​ಗೆ ತೆರಳಿದ್ದರು. ಸದ್ಯ ಅಭಿಷೇಕ್, ಐಶ್ವರ್ಯ ಮಾಲ್ಡೀವ್ಸ್ ಐಷಾರಾಮಿ ರೆಸಾರ್ಟ್‍ನ ವಿಲ್ಲಾದಲ್ಲಿ ತಂಗಿದ್ದಾರೆ.

ಅದ್ರೆ ಈ ವಿಲ್ಲಾದಲ್ಲಿ ಒಂದು ದಿನದ ಬಾಡಿಗೆ ಕೇಳಿದ್ರೆ ಒಂದು ಕ್ಷಣ ಶಾಕ್​ ಆಗುತ್ತೆ. ಅಭಿ ,ಐಶ್ ಜೋಡಿ ವಾಸಿಸುತ್ತಿರುವ ಈ ಐಷಾರಾಮಿ ವಿಲ್ಲಾದ ಒಂದು ದಿನ ಬೆಲೆ 10 ಲಕ್ಷ ರೂ ಎನ್ನಲಾಗಿದೆ. ರೆಸಾರ್ಟ್​ನ ಎಲ್ಲಾ ವಿಲ್ಲಾದಲ್ಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಸ್ವಿಮಿಂಗ್​ ಪೂಲ್​ಗಳು ಇವೆ.

ಇನ್ನು ರೀಫ್ ವಾಟರ್ ಪೂಲ್ ವಿಲ್ಲಾ, ಸನ್‍ಸೆಟ್ ವಾಟರ್ ಪೂಲ್ ವಿಲ್ಲಾ, ಲಗೂನ್ ವಾಟರ್ ಪೂಲ್ ವಿಲ್ಲಾ ಮತ್ತು ಮಲ್ಟಿ-ಬೆಡ್‍ರೂಂ ರೆಸಿಡೆನ್ಸಸ್ ಹೀಗೆ ಬೇರೆ ಬೇರೆ ತರದ ವಿಲ್ಲಾಗಳು ಈ ಐಷಾರಾಮಿ ರೆಸಾರ್ಟ್​ನಲ್ಲಿವೆ. ಸದ್ಯ ಅಭಿ ಮತ್ತು ಐಶ್​ ಇಬ್ಬರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಈ ರೆಸಾರ್ಟ್‍ನ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *