ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಫೋಟೋಗೆ ಪೋಸ್​ ಕೊಟ್ಟ ರಕುಲ್​ ಪ್ರೀತ್​ ಸಿಂಗ್​​​


ನಟಿಮಣಿಯರಿಗೆ ತಮಗೆ ಫ್ರೀ ಟೈಂ ಸಿಕ್ಕಾಗೆಲ್ಲಾ ಮಾಲ್ಡೀವ್ಸ್​ಗೆ ಹೋಗಿ, ಮಾಲ್ಡೀವ್ಸ್​ನ ಬೀಚ್​ನಲ್ಲಿ ಬಿಕಿನಿ ತೊಟ್ಟು ಪೋಸ್​ ಕೊಡೋದು ರೂಢಿಯಾಗಿಬಿಟ್ಟಿದೆ.. ಕಳೆದ ತಿಂಗಳು ಪೂಜಾ ಹೆಗ್ಡೆ ಮಾಲ್ಡೀವ್ಸ್​ನಲ್ಲಿ ಬಿಡುವು ಮಾಡಿಕೊಂಡು ಬಿಕಿನಿ ತೊಟ್ಟು ಕಾಲ ಕಳೆದಿದ್ದರು.

ಪೂಜಾ ಹೆಗ್ಡೆ ನಂತರ ಟಾಲಿವುಡ್​ ಎವರ್​ ಗ್ರೀನ್​ ಬ್ಯೂಟಿ ಇಲಿಯಾನ ಕೂಡ ಮೊನ್ನೆ- ನೆನ್ನೆ ವರೆಗೂ ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ತಮ್ಮ ಹಾಟ್​ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟು ಪಡ್ಡೆ ಹುಡುಗರ ಹಾರ್ಟ್​ ಬೀಟ್​ ಜೋರಾಗುವಂತೆ ಮಾಡಿದ್ದರು.

ಸದ್ಯ ಆ ಸರದಿ ಈಗ ರಕುಲ್​ ಪ್ರೀತ್​ ಸಿಂಗ್​ ಗೆ ಬಂದಿದೆ. ಸದ್ಯ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿರುವ ಬಳುಕೋ ಬಳ್ಳಿ ರಕುಲ್​ ಪ್ರೀತ್​ ನೀಲಿ ಬಿಕಿನಿ ತೊಟ್ಟು ಹಾಟ್​ ಹಾಟ್​ ಫೋಟೋವನ್ನ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಅಲ್ಲದೆ ‘ವಾಟರ್​ಬೇಬಿ ಥ್ರೋ ಬ್ಯಾಕ್​’ ಅಂತ ಕ್ಯಾಪ್ಷನ್​ ಹಾಕುವುದರ ಮೂಲಕ ಪಡ್ಡೆ ಹುಡುಗರ ಹಾರ್ಟ್​ ಬೀಟ್​ ಹೆಚ್ಚಾಗುವಂತೆ ಮಾಡಿದ್ದಾರೆ.

 

View this post on Instagram

 

A post shared by Rakul Singh (@rakulpreet)

The post ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಫೋಟೋಗೆ ಪೋಸ್​ ಕೊಟ್ಟ ರಕುಲ್​ ಪ್ರೀತ್​ ಸಿಂಗ್​​​ appeared first on News First Kannada.

News First Live Kannada


Leave a Reply

Your email address will not be published. Required fields are marked *