ನಟಿಯರು ಫ್ರೀ ಟೈಂ ಸಿಕ್ಕಾಗ ಮಾಲ್ಡೀವ್ಸ್ಗೆ ಹೋಗಿ ಸಮಯ ಕಳೆಯೋದು ಸಾಮಾನ್ಯ. ಅದರಲ್ಲೂ ಬಹು ಭಾಷಾ ನಟಿ ಪೂಜಾ ಹೆಗ್ಡೆ ಮಾತ್ರ ತಮ್ಮ ಬಿಡುವಿನ ಬಹು ಸಮಯವನ್ನ ಮಾಲ್ಡೀವ್ಸ್ನ ಬೀಚ್ನಲ್ಲೇ ಕಳೆಯುತ್ತಾರೆ. ಮಾಲ್ಡೀವ್ಸ್ನ ಬೀಚ್ಗಳಲ್ಲಿ ಟು ಪೀಸ್ ತೊಟ್ಟ ಪೋಸ್ ಕೊಡೋದು ಅಂದ್ರೆ ಪೂಜಾಗೆ ಎಲ್ಲಿಲ್ಲದ ಸಂತಸ.
ಕಳೆದ ಕೆಲ ದಿನಗಳ ಹಿಂದೆ ಪೂಜಾ ಮಾಲ್ಡೀವ್ಸ್ಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡಿ ಮನೆಗೆ ಮರಳಿದ್ದರು.ಮಾಲ್ಡೀವ್ಸ್ನಿಂದ ಮನೆಗೆ ಮರಳಿದರೂ,ಪೂಜಾ ಮನಸ್ಸು ಮಾತ್ರ ಮಾಲ್ಡೀವ್ಸ್ನ ಮರಳಿನ ಮೇಲೇಯೇ ಇದೆ. ಹೌದು ಪೂಜಾ ಹೆಗ್ಡೆ ಮನೆಗೆ ಬಂದು ವಾರಗಳೇ ಕಳೆದರೂ,ಮಾಲ್ಡೀವ್ಸ್ ಹ್ಯಾಂಗೋವರ್ ಮಾತ್ರ ಇನ್ನು ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಇನ್ಸ್ಟಾಗ್ರಾಂನಲ್ಲಿ ಒಂದು ಸೆಕ್ಸಿ ಫೋಟೋವೊಂದನ್ನು ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಪೂಜಾ ಮಾಲ್ಡೀವ್ಸ್ನ ಬೀಚ್ನಲ್ಲಿ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ಹಾಟ್ ಹಾಟ್ ಪೋಟೋಸ್,ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿವೆ.ಪೂಜಾ ತುಂಡುಡುಗೆ ತೊಟ್ಟು ಕೊಟ್ಟಿರುವ ಸೆಕ್ಸಿ ಪೋಸ್ಗೆ ಫ್ಯಾನ್ಸ್ ಫಿಧಾ ಆಗಿದ್ದಾರೆ. ಸದ್ಯ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕೊರೋನಾ ಒಂದಿಲ್ಲ ಅಂದಿದ್ರೆ ಇದೇ ಜನವರಿ 14 ನೇ ತಾರೀಖು,ರಾಧೆ ಶ್ಯಾಮ್ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಸದ್ಯ ರಾಧೆ ಶ್ಯಾಮ್ ಸಿನಿಮಾ ಮುಂದೂಡಲ್ಪಟ್ಟಿದೆ. ಇದರ ಜೊತೆಗೆ ಆಚಾರ್ಯ, ತಮಿಳಿನ ಬೀಸ್ಟ್, ಹಿಂದಿಯ ಸರ್ಕಸ್ ಸಿನಿಮಾಗಳು ರಿಲೀಸ್ ಆಗಲು ಸರತಿ ಸಾಲಿನಲ್ಲಿ ಕಾದು ಕುಳಿತಿವೆ.