ಬೆಂಗಳೂರು: ಕೊರೊನಾ ಲಾಕ್​​ಡೌನ್​ ಹಿನ್ನೆಲೆ ಮಾಲ್​ಗಳು ಬಂದ್​ ಆಗಿರೋ ಕಾರಣ ಬಾಡಿಗೆ, ವಿದ್ಯುತ್ ಶುಲ್ಕಗಳಿಂದ ವಿನಾಯಿತಿ ನೀಡುವಂತೆ ಕೋರಿ ಇಂದು ಮಾಲ್‌ಗಳ ನಿಯೋಗ  ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪರನ್ನ ಭೇಟಿಯಾಗಿ ನಿಯೋಗ ಮನವಿ ಸಲ್ಲಿಸಿದೆ. ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗರುಡಾ ಮಾಲ್ ಸಿಇಒ‌ ನಂದೀಶ್, ನಾವು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು‌ ಬದ್ಧರಿದ್ದೇವೆ. ಇದರ ಜೊತೆಗೆ ಮಾಲ್​ಗಳ ಬಾಡಿಗೆ, ವಿದ್ಯುತ್ ಫಿಕ್ಸ್ಡ್​​​ ಚಾರ್ಜ್ ಮನ್ನಾ ಮಾಡಲು ಕೋರಿದ್ದೇವೆ ಎಂದು ತಿಳಿಸಿದರು.

 

The post ಮಾಲ್​​ಗಳ ನಿಯೋಗದಿಂದ ಸಿಎಂ ಭೇಟಿ.. ಮನವಿ ಏನು? appeared first on News First Kannada.

Source: newsfirstlive.com

Source link