‘ಅವತಾರ ಪುರುಷ’ ಸಿನಿಮಾದ ಎರಡು ಭಾಗಗಳ ಶೂಟಿಂಗ್​​ ಮುಗಿಸಿರುವ ನಟಿ ಆಶಿಕಾ ರಂಗನಾಥ್​ ಸದ್ಯ ಲಾಕ್​ಡೌನ್​ ಸಮಯವನ್ನ ತಮ್ಮ ಫಾರ್ಮ್​ಹೌಸ್​ನಲ್ಲಿ ಕಳೆಯುತ್ತಿದ್ದಾರೆ. ಮಾವಿನ ತೋಟದಲ್ಲಿ ಇಡೀ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ ಸ್ಯಾಂಡಲ್​ವುಡ್​ ಪಟಾಕಿ. ತಮ್ಮ ವಯಸ್ಸಿನವರಲ್ಲದೇ, ಕುಟುಂಬದ ಇನ್ನೂ ಅನೇಕರ ಜೊತೆ ಆಶಿಕಾ ಲಾಕ್​ಡೌನ್​ನಲ್ಲಿ ಲಾಕ್​ ಆಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡ್ತಿದೆ.

ತೋಟದ ಮನೆಯಲ್ಲಿನ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿರೋ ಆಶಿಕಾ ರಂಗನಾಥ್, ಮಾವಿನ ಹಣ್ಣುಗಳನ್ನ ಕೀಳುವುದರ ಜೊತೆಗೆ ತರಕಾರಿಯನ್ನೂ ಕೊಯ್ಯುತ್ತಿದ್ದಾರೆ.

ಸದ್ಯ ರಿಲೀಸ್​ಗೆ ರೆಡಿಯಾಗಿರುವ ‘ಅವತಾರ ಪುರುಷ’ ಹೊರತುಪಡಿಸಿ, ಶ್ರೀಮುರಳಿ ನಟನೆಯ ‘ಮದಗಜ’ ಹಾಗೂ ಪವನ್​ ಒಡೆಯಾರ್​ ನಿರ್ದೇಶನದ ‘ಱಮೋ’ ಸಿನಿಮಾಗಳಲ್ಲಿ ಆಶಿಕಾ ತೊಡಗಿಸಿಕೊಂಡಿದ್ದಾರೆ. ಕಿಚ್ಚನ ಬಹು ನಿರೀಕ್ಷಿತ ‘ಕೋಟಿಗೊಬ್ಬ-3’ ಸಿನಿಮಾದ ಸ್ಪೆಷಲ್​ ಹಾಡೊಂದರಲ್ಲೂ ಆಶಿಕಾ ಹೆಜ್ಜೆ ಹಾಕಿದ್ದಾರೆ.

ಜೊತೆಗೆ ಅಚ್ಚರಿಯ ಹಣ್ಣುಗಳು.. ಸ್ನೇಹಿತರೊಂದಿಗೆ ಜಾಲಿ ಮೂಡ್​ನಲ್ಲಿರೋ ಆಶೀಕಾ ರಂಗನಾಥ್, ತೋಟದಲ್ಲಿ ಹಣ್ಣು ಕೀಳುತ್ತಿರೋದನ್ನ ನೋಡಿ ಖುಷಿ ಪಟ್ಟಿದ್ದಾರೆ. ಜೊತೆಗೆ ತಮ್ಮ ನಾಯಿ ಕೋಳಿಯನ್ನ ಅಟ್ಟಿಸಿಕೊಂಡು ಹೋಗ್ತಿರೋದನ್ನ ನೋಡಿ ಅವರು ಈ ಕೆಳಗಿನ ಎಕ್ಸ್​ಪ್ರೆಷನ್ ನೀಡಿದ್ದು.. ಇದು ಸಖತ್ ವೈರಲ್ ಆಗ್ತಿದೆ. ಅಂದ ಹಾಗೆ. ಈ ವಿಷಯವನ್ನ ಸ್ವತಃ ಆಶಿಕಾ ರಂಗನಾಥ್​​, ಫೋಟೋ ಶೇರ್​ ಮಾಡ್ತಾ ತಿಳಿಸಿದ್ದಾರೆ.

 

The post ಮಾವಿನ ತೋಟದಲ್ಲಿ ಅಂಥದ್ದೇನು ನೋಡಿದ್ರು ಪಟಾಕಿ ಪೋರಿ ಆಶಿಕಾ ರಂಗನಾಥ್..?! appeared first on News First Kannada.

Source: newsfirstlive.com

Source link