ಬೆಂಗಳೂರು: ಇಂದಿನಿಂದ ಮತ್ತೆ ಸಂಚಾರ ಆರಂಭಿಸಿರುವ KSRTC ತನ್ನ ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಿದೆ. ಹಳೆ ಪಾಸ್​ಗಳ ಅವಧಿಯನ್ನ 18 ದಿನಗಳವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿಬಿಟ್ಟಿತು. ಇದರಿಂದಾಗಿ ಪಾಸ್​ ಮಾಡಿಸಿಕೊಂಡ ಪ್ರಯಾಣಿಕರು ಸುಮ್ಮನೆ ದುಡ್ಡು ಕಟ್ಟಿ ಪಾಸ್ ಮಾಡಿಸಿದ್ವಿ. ಯಾವುದೇ ಪ್ರಯೋಜನ ಆಗಿಲ್ಲ ಅಂತಾ ನೊಂದ್ಕೊಂಡಿದ್ದರು. ಅಲ್ಲದೇ ಮತ್ತೆ ಈಗ ದುಡ್ಡು ಕೊಟ್ಟು ಪಾಸ್ ಮಾಡಿಸಲೇಬೇಕಲ್ವಾ ಅಂತಾ ಬೇಸರ ವ್ಯಕ್ತಪಡಿಸುತ್ತಿದ್ದರು. ಇದೀಗ ಕೆಎಸ್​​ಆರ್​ಟಿಸಿ ಅಂತವರಿಗೆ ರಿಲೀಫ್ ನೀಡಿದ್ದು, ಯಾರೆಲ್ಲ ಏಪ್ರಿಲ್ 8 ರಿಂದ 27 ವರೆಗೆ ಪಾಸ್ ಪಡೆದಿದ್ದರೋ ಅವರ ಹಿಂದಿನ ಪಾಸ್ ಅವಧಿಯನ್ನ 18ಗಳವರೆಗೆ ವಿಸ್ತರಿಸಿದೆ.

ಈ ಮಾಸಿಕ ಪಾಸ್ ಹೊಂದಿರುವವರು ಪಾಸ್ ಕೌಂಟರ್​​ನಲ್ಲಿ ಪಾಸ್ ಅವಧಿ ವಿಸ್ತರಣಾ ದಿನಾಂಕ, ಸಹಿ ಹಾಗೂ ಸೀಲ್ ಹಾಕಿಸಿಕೊಂಡು ಪ್ರಯಾಣ ಮಾಡಬಹುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಮತ್ತೊಂದು ವಿಚಾರ ಏನಂದ್ರೆ ನಾಳೆಯಿಂದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪುನರಾರಂಭ ನೀಡಲಿದೆ. ಆಯಾ ರಾಜ್ಯಗಳ ಮಾರ್ಗಸೂಚಿಯಂತೆ ಬಸ್ ಕೆಎಸ್​ಆರ್​​ಟಿಸಿ ಕಾರ್ಯಾಚರಣೆ ಮಾಡಲಿದೆ. ಬೆಳಗ್ಗೆ 6 ರಿಂದ ಸಂಜೆ 6 ಒಳಗೆ ತಲುಪುವಂತೆ ಬಸ್ ಸೇವೆ ಇರಲಿದೆ.

ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಬಸ್ ಸಂಚಾರ ಮಾಡಲಿದೆ. ಶೇಕಡಾ 50% ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ ಸಂಚಾರ ನಡೆಯಲಿದೆ.

The post ಮಾಸಿಕ ಪಾಸ್​ ಹೊಂದಿದ್ದವ್ರಿಗೆ KSRTC ಗುಡ್​​​ನ್ಯೂಸ್; ಹಿಂದಿನ ಪಾಸ್​ ಅವಧಿ ವಿಸ್ತರಣೆ​ appeared first on News First Kannada.

Source: newsfirstlive.com

Source link