ಮಾಸ್ಕ್​​ ಹಾಕಿ ಎಂದಿದಕ್ಕೆ ಬೆಂಗಳೂರಲ್ಲಿ ಪುಂಡರ ಅಟ್ಟಹಾಸ; ಲೇಡಿ ಪೊಲೀಸ್ ಮೇಲೂ ಹಲ್ಲೆ


ಬೆಂಗಳೂರು: ಮಾಸ್ಕ್ ಧರಿಸದ ಹಿನ್ನೆಲೆ ಮಾಸ್ಕ್​​ ಧರಿಸಿ ಎಂದು ಹೇಳಿದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆಯೇ ಪುಂಡರ ಗುಂಪು ಹಲ್ಲೆ ಮಾಡಿರುವ ಘಟನೆ ಯಲಹಂಕ ಸಮೀಪದ ಚಿಕ್ಕ ಬೆಟ್ಟಹಳ್ಳಿಯಲ್ಲಿ ನಡೆದಿದೆ.

ಹಲ್ಲೆ ಮಾಡಿದ ಪುಂಡರ ಗ್ಯಾಂಗ್​​ ಕಾರಿನಲ್ಲಿ ಯಲಹಂಕ ನ್ಯೂಟೌನ್ ಪೂಲೀಸ್ ಠಾಣೆ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ವಾಹನ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಯುವಕರು ಕಂಠಪೂರ್ತಿ ಕುಡಿದು ವಾಹನ ಚಾಲಯಿಸುತ್ತಿದ್ದದ್ದು ಕಂಡು ಬಂದಿತ್ತು. ಇದರಿಂದ ಕಾರಿನಿಂದ ಇಳಿಯಲು ಸೂಚನೆ ನೀಡಿ ಮಾಸ್ಕ್​ ಧರಿಸುವಂತೆ ಪೊಲೀಸರು ಸೂಚನೆ ನೀಡಿದ್ದರು.

ಆದರೆ ಪೊಲೀಸರ ಸೂಚನೆ ಬೆನ್ನಲ್ಲೇ ಗರಂ ಆದ ಯುವಕರು ಕಾರಿನಿಂದ ಇಳಿದು ಏಕಾಏಕಿ ಪೊಲೀಸ್​ ಸಬ್​​​ಇನ್ಸ್​ಪೆಕ್ಟರ್​​ ಸೇರಿ ಇಬ್ಬರು ಕಾನ್ಸ್​ಟೇಬಲ್​​ಗಳ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಈ ಕುರಿತ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ಮಾಡುತ್ತಿರುವುದು ಕಾಣಬಹುದಾಗಿದೆ.

ಸದ್ಯ ಘಟನೆ ಸಂದರ್ಭದಲ್ಲಿ ಪೊಲೀಸರ ನೆರವಿಗೆ ಬಂದ ಸಾರ್ವಜನಿಕರು ಪುಂಡ ಯುವಕರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುಡಿತ ಮತ್ತು ಇಳಿದ ಬಳಿಕ ಪುಂಡರು ಪೊಲೀಸರ ಮೇಲೆ ಹಲ್ಲೆ ಮಾಡಿದನ್ನು ಒಪ್ಪಿಕೊಂಡಿದ್ದು, ಪೊಲೀಸರು ಪದೇ ಪದೆ ಕಾರಿನಿಂದ ಇಳಿಯಲು ಸೂಚನೆ ನೀಡಿದ್ದರು. ಅಲ್ಲದೇ ನಾವು ತುರ್ತಾಗಿ ಹೋಗಬೇಕಿತ್ತು. ಇದರಿಂದ ಕೋಪಗೊಂಡ ಹಲ್ಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರಂತೆ. ಕುಡಿತ ಮತ್ತಿನಲ್ಲಿ ಕಾರು ಚಲಾಯಿಸಿದ್ದು ಅಲ್ಲದೇ ಮಾಸ್ಕ್​ ಧರಿಸದೆ ಪೊಲೀಸರ ಮೇಲೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

News First Live Kannada


Leave a Reply

Your email address will not be published. Required fields are marked *