ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಯಾಣಿಕ; ಅರ್ಧ ದಾರಿಯಲ್ಲಿ ಹಿಂತಿರುಗಿದ ವಿಮಾನ: ಮುಂದೇನಾಯ್ತು? | Passenger denies to wear mask in Flight US Flight turns back mid air


ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಯಾಣಿಕ; ಅರ್ಧ ದಾರಿಯಲ್ಲಿ ಹಿಂತಿರುಗಿದ ವಿಮಾನ: ಮುಂದೇನಾಯ್ತು?

ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್: ಭಾರತ ಸಹಿತ ಜಗತ್ತಿನ ವಿವಿಧ ಕಡೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊವಿಡ್ ಮೂರನೇ ಅಲೆ ಕಾಣಿಸಿಕೊಂಡಿದೆ. ಮೊದಲ ಹಾಗೂ ಎರಡನೇ ಅಲೆಯಷ್ಟು ತೀವ್ರವಾಗಿ ಕೊರೊನಾ ಮೂರನೇ ಅಲೆ ಬಾಧಿಸುತ್ತಿಲ್ಲ ಎಂದು ಹೇಳಲಾಗುತ್ತತಿದೆ ಆದರೂ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಕೊವಿಡ್ ನಿಯಮಾವಳಿಗಳು ಇನ್ನೂ ಜಾರಿಯಲ್ಲಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಇಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದಂತಹ ಘಟನೆ ನಡೆದಿದೆ. ಅದರಿಂದ ವಿಮಾನವೇ ಮಾರ್ಗಮಧ್ಯೆ ಹಿಂತಿರುಗುವಂತೆ ಆಗಿದೆ. ಮಿಯಾಮಿಯಿಂದ ಲಂಡನ್​ಗೆ ತೆರಳುತ್ತಿದ್ದ ಅಮೆರಿಕಾದ ಏರ್​ಲೈನ್ಸ್ ಜೆಟ್​ಲೈನರ್ ಗುರುವಾರ ಮಾರ್ಗಮಧ್ಯೆ ವಾಪಸಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಙ್ರಯಾಣಿಕನೊಬ್ಬ ಕೊರೊನಾ ವಿರುದ್ಧ ಮಾಸ್ಕ್ ಧರಿಸಲು ನಿರಾಕರಿಸಿದ ಕಾರಣ ಹೀಗೆ ಆಗಿದೆ ಎಂದು ಏರ್​ಲೈನ್ ಸಂಸ್ಥೆ ಹೇಳಿದೆ.

ಅಮೆರಿಕಾದ ಏರ್​ಲೈನ್ಸ್ ಪ್ಲೈಟ್ 38 ಮಿಯಾಮಿಯಿಂದ ಲಂಡನ್​ಗೆ ಹೋಗುತ್ತಿತ್ತು. ಅದು ಮಾರ್ಗಮಧ್ಯೆ ವಾಪಸಾಗಿದೆ. 129 ಪ್ರಯಾಣಿಕರನ್ನು ಹಾಗೂ 14 ಸಿಬ್ಬಂದಿಗಳನ್ನು ಹೊತ್ತ ಏರ್​ಲೈನ್ ಬೋಯಿಂಗ್ 777 ವಿಮಾನ ಲ್ಯಾಂಡ್ ಆಗುವ ವೇಳೆಗೆ ಪೊಲೀಸರು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.

ಹಾಗೂ ವಿಮಾನ ಲ್ಯಾಂಡ್ ಆದಾಗ ಪೊಲೀಸರು ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಒಬ್ಬರು ಸಿಎನ್​ಎನ್​ಗೆ ಹೇಳಿಕೆ ನೀಡಿದ್ದಾರೆ. ಮಾಸ್ಕ್ ಧರಿಸಲು ಒಪ್ಪದ ವ್ಯಕ್ತಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕಾದ ಏರ್​ಲೈನ್ಸ್ ಹೇಳಿದೆ.

ಫೆಡರಲ್ ನಿಯಮಗಳನ್ನು, ಯುಎಸ್ ಡೊಮೆಸ್ಟಿಕ್ ವಿಮಾನದಲ್ಲಿ ಕೊರೊನಾ ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮಾಡಿದ್ದು, ಅದನ್ನು ನಿರಾಕರಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಜನವರಿ 2021 ರಲ್ಲಿ ಹೇಳಲಾಗಿತ್ತು.

TV9 Kannada


Leave a Reply

Your email address will not be published. Required fields are marked *