ಮಾಸ್ಟರ್​ ಮಂಜುನಾಥ್​ ಮಗ ವೇದಾಂತ್​ ಕೂಡ ಚಿತ್ರರಂಗಕ್ಕೆ ಬರ್ತಾನಾ? ಉತ್ತರ ನೀಡಿದ ‘ಮಾಲ್ಗುಡಿ ಡೇಸ್​’ ನಟ | Malgudi Days actor Master Manjunath talks about his son VedanthMaster Manjunath Family: ‘ಡ್ರಾಮಾ ಮತ್ತು ಹಾಡುಗಾರಿಕೆಯನ್ನು ವೇದಾಂತ್​ ಚೆನ್ನಾಗಿ ಕಲಿಯುತ್ತಿದ್ದಾನೆ. ಆಯ್ಕೆಗಳು ಅವನ ಗಮನದಲ್ಲಿವೆ’ ಎಂದು ಮಾಸ್ಟರ್​ ಮಂಜುನಾಥ್​ ಹೇಳಿದ್ದಾರೆ.

TV9kannada Web Team


| Edited By: Madan Kumar

May 14, 2022 | 9:36 AM
ಶಂಕರ್​ ನಾಗ್​ ನಿರ್ದೇಶನದ ‘ಮಾಲ್ಗುಡಿ ಡೇಸ್​’ (Malgudi Days) ಧಾರಾವಾಹಿ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದ ಮಾಸ್ಟರ್​ ಮಂಜುನಾಥ್​ ಅವರು ಈಗ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದಾರೆ. ಬಾಲ್ಯದಲ್ಲಿ ಅವರು ನಿಭಾಯಿಸಿದ ಪಾತ್ರಗಳನ್ನು ಪ್ರೇಕ್ಷಕರು ಸಖತ್​ ಎಂಜಾಯ್​ ಮಾಡಿದ್ದಾರೆ. ಟಿವಿಯಲ್ಲಿ ಅವರ ಸಿನಿಮಾಗಳು (Master Manjunath Movies) ಪ್ರಸಾರವಾದರೆ ಜನರು ಈಗಲೂ ಆಸಕ್ತಿಯಿಂದ ನೋಡುತ್ತಾರೆ. ಅಂಥ ಮನಸೆಳೆಯುವ ನಟನೆ ಮಾಸ್ಟರ್​ ಮಂಜುನಾಥ್​ (Master Manjunath) ಅವರದ್ದು. ಈಗ ಅವರ ಪುತ್ರ ವೇದಾಂತ್​ ಕೂಡ ಚಿತ್ರರಂಗಕ್ಕೆ ಬರುತ್ತಾನಾ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ನಮ್ಮ ತಂದೆ-ತಾಯಿ ನನ್ನ ಮೇಲೆ ಯಾವ ರೀತಿ ಒತ್ತಡ ಹಾಕಲಿಲ್ಲವೋ ಹಾಗೆಯೇ ನಾನು ಕೂಡ ಮಗನ ಮೇಲೆ ಒತ್ತಡ ಹೇರುತ್ತಿಲ್ಲ. ಅವನು ಶಾಲೆಯಲ್ಲಿ ಡ್ರಾಮಾ ಮತ್ತು ಹಾಡುಗಾರಿಕೆಯನ್ನು ಚೆನ್ನಾಗಿ ಕಲಿಯುತ್ತಿದ್ದಾನೆ. ಅವನಿಗೆ ನಟನೆಯಲ್ಲಿ ಆಸಕ್ತಿ ಬಂದರೆ ನೋಡೋಣ. ಆಯ್ಕೆಗಳು ಅವನ ಗಮನದಲ್ಲಿವೆ. ಆದರೆ ಇದನ್ನೇ ಮಾಡು, ಅದನ್ನೇ ಮಾಡು ಅಂತ ಒತ್ತಡ ಹೇರಲ್ಲ’ ಎಂದು ಮಾಸ್ಟರ್​ ಮಂಜುನಾಥ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *