ಮಾಸ್ತಿಗುಡಿ ಸಿನಿಮಾದ ಶೂಟಿಂಗ್​ನಲ್ಲಿ ಆದ ದುರಂತದಿಂದ ಕನ್ನಡ ಚಿತ್ರರಂಗದ ಉದಯೋನ್ಮುಖ ನಟರಾದ ಅನಿಲ್​ ಹಾಗೂ ಉದಯ್​ ಕೊನೆಯುಸಿರೆಳೆದಿದ್ದರು. ಆದ್ರೆ ಈ ಘಟನೆ ನಡೆಯೋದಕ್ಕೂ ಮುನ್ನವೇ ಸ್ಪಾಟ್​​ಗೆ ಬಂದ ಒಬ್ಬರಿಗೆ ಮಾತ್ರ ಈ ದುರಂತ ನಡೆಯುವ ಬಗ್ಗೆ ಸೂಚನೆ ಸಿಕ್ಕಿತ್ತು ಅಂತ ಸ್ಟಂಟ್​ ಮಾಸ್ಟರ್​​ ರವಿವರ್ಮಾ ನ್ಯೂಸ್​ ಪಸ್ಟ್​​ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಹೌದು.. ನಟ ದುನಿಯಾ ವಿಜಯ್​ ಹೆಚ್ಚಾಗಿ ಆರಾಧಿಸುವ ವಿನಯ್​ ಗುರೂಜಿ ಅಂದು ಚಿತ್ರೀಕರಣ ಆಗ್ತಿದ್ದ ತಿಪ್ಪಗೊಂಡನಹಳ್ಳಿ ಕೆರೆಗೆ ಬಂದಿದ್ದರು. ಬಂದವರೇ ‘ಅದ್ಯಾಕೋ ಏನೋ ಸರಿ ಆದಂತೆ ಕಾಣಿಸುತ್ತಿಲ್ಲ. ಅಲ್ಲಿರಲು ಆಗ್ತಿಲ್ಲ’ ಅನ್ನೋ ಕಾರಣ ಹೇಳಿ ಹೊರಟು ಬಿಟ್ರಂತೆ. ಆದ್ರೆ ಹೋಗುವ ಮುಂಚೆ ದುನಿಯಾ ವಿಜಯ್​ ಕೈಗೆ ತಮ್ಮ ಕಾರಿನಲ್ಲಿದ್ದ ಸಾಯಿ ಬಾಬ ಮೂರ್ತಿಯನ್ನ ನೀಡಿ, ರವಿವರ್ಮಾ ಕೈಗೆ ಕೊಡುವಂತೆ ಸೂಚಿಸಿದ್ದರು ಅಂತ ರವಿವರ್ಮಾ ನ್ಯೂಸ್​​ ಫಸ್ಟ್​ಗೆ ತಿಳಿಸಿದ್ದಾರೆ.

‘ಇದೆಲ್ಲದರ ಮಧ್ಯೆ ವಿನಯ್​ ಗುರೂಜಿ ಸ್ಪಾಟ್​ಗೆ ಬರ್ತಾರೆ. ಏನೋ ಸರಿಯಿಲ್ಲ, ಕುಂಬಳಕಾಯಿ ತಂದು ಹೊಡಿಯಿರಿ ಅಂತಾರೆ. ವಿನಯ್​ ಗುರೂಜಿ ಅದೇನೋ ಮನಸ್ಸು ತಡೆಯೋದಕ್ಕೆ ಆಗದೇ ಅಲ್ಲಿಂದ ಹೊರಡ್ತಾರೆ. ಕಾರ್​ ಬಳಿ ಹೋದವರೇ ಅವರ ಕಾರಿನಲ್ಲಿದ್ದ ಸಾಯಿ ಬಾಬ ಮೂರ್ತಿಯನ್ನ ಕಿತ್ತು ದುನಿಯಾ ವಿಜಯ್​ ಅವರ ಕೈಗೆ ಕೊಟ್ಟು ನನಗೆ ಕೊಡೋದಕ್ಕೆ ಹೇಳಿದ್ರು.’

ರವಿವರ್ಮಾ, ಸ್ಟಂಟ್​​ ಮಾಸ್ಟರ್​​

ಹಾಗಾದ್ರೆ ಈ ದುರಂತದ ಬಗ್ಗೆ ವಿನಯ್​ ಗುರೂಜಿಗೆ ನಿಜಕ್ಕೂ ಅರಿವಿತ್ತಾ.? ಒಂದು ವೇಳೆ ಹೌದು ಅಂತಾದ್ರೆ ಯಾಕೆ ಆ ದಿನ ಚಿತ್ರೀಕರಣ ಮಾಡೋದು ಬೇಡ ಅನ್ನೋ ಸಲಹೆ ನೀಡಲಿಲ್ಲ.? ಅನ್ನೋ ಪ್ರಶ್ನೆಗಳು ನಿಮ್ಮನ್ನ ಕಾಡ್ತಿರಬಹುದು..

ಲೈವ್​ ಆಗಿಯೇ ಮಾಡ್ತೀವಿ..ಅದಕ್ಕೇ ಅಲ್ವಾ ಮೀಡಿಯಾ ಕರೆಸಿದ್ದು ಅಂದ್ರು

‘ಮಧ್ಯಾಹ್ನ ಹೊತ್ತಿಗೆ ಜಂಪ್​ ಸೀಕ್ವೆನ್ಸ್​ ಸ್ಟಾರ್ಟ್​ ಮಾಡೋಣ ಅಂತಾಯ್ತು. ಬ್ರೇಕ್​ ತೆಗೆದುಕೊಂಡು ಮಾಡೋಣ ಅಂದ್ರೆ, ಇಲ್ಲಾ ಆಗಲೇ ಮಾಡೋಣ ಅಂದ್ರು. ನಾನು ಬೇಡ ಅಂದ್ರು ಯಾರೂ ಕೇಳ್ತಾನೇ ಇಲ್ಲ. ಅನಿಲ್​, ಉದಯ್​, ದುನಿಯಾ ವಿಜಯ್​ ಕೈ ಹಿಡಿದುಕೊಂಡು ಕೇಳಿದ್ದೀನಿ, ಓಕೆನಾ ಅಂತ. ಇಷ್ಟೆಲ್ಲಾ ಆಗ್ತಿರಬೇಕಾದ್ರೆ, ಒಬ್ಬೊಬ್ರು ಮೀಡಿಯಾ ಮುಂದೆ ಒಂದೊಂದು ಥರ ಮಾತಾಡಿದ್ರು. ಆವತ್ತಿನ ದಿನ ರವಿವರ್ಮಾ ಅಲ್ಲದಿದ್ರೂ, ಹಾಲಿವುಡ್​ನಿಂದ ಬಂದ ಫೈಟ್​ ಮಾಸ್ಟರ್​ ಕೂಡ ಅದನ್ನೇ ಮಾಡ್ತಿದ್ದ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡೇ ಮಾಡಿದ್ವಿ. ಆದ್ರೆ ಬಜೆಟ್​ ಜಾಸ್ತಿ ಆಗುತ್ತೆ ಅನ್ನೋ ಕಾರಣಕ್ಕೆ ಅನಿಲ್​ ಎರಡು ಮೋಟರ್​ ಬೋಟ್​ ತರಿಸಿಲ್ಲ. ಮತ್ತೆ ಇವಾಗ ಹೇಗೆ ಅಂತ ಕೇಳಿದ್ದಕ್ಕೆ, ‘ಗುರು ಅಲ್ಲೇ ತಾನೇ ಗುರು..ಅಲ್ಲಿ ಬೀಳ್ತೀವಿ, ಇಲ್ಲಿ ಬರ್ತೀವಿ’ ಅಂದ. ಇನ್ನು ನನ್ನ ಸಂಘದಿಂದ ಮೂರು ಜನಕ್ಕೂ ಮೂರು ಡ್ಯೂಪ್​ಗಳನ್ನ ಕರೆದುಕೊಂಡು ಬಂದಿದ್ವಿ. ಡ್ಯೂಪ್​ಗಳನ್ನ ಹಾಕೊಂಡು ಮಾಡೋಣ ಅಂದ್ರು ಒಪ್ಕೊಳ್ತಿಲ್ಲ. ಲೈವ್​ ಮಾಡ್ತೀವಿ, ಅದಕ್ಕೆ ಮೀಡಿಯಾ ಕರೆಸಿದ್ದು ಅಂದ್ರು’ ಅನ್ನೋದು ಸ್ಟಂಟ್​ ಮಾಸ್ಟರ್​ ರವಿವರ್ಮಾ ಮಾತು.

The post ‘ಮಾಸ್ತಿಗುಡಿ ದುರಂತ’ದ ಬಗ್ಗೆ ವಿನಯ್​ ಗುರೂಜಿಗೆ ಮೊದಲೇ ಗೊತ್ತಿತ್ತಾ? ಸ್ಪಾಟ್​ಗೆ ಬಂದಿದ್ದ ಗುರೂಜಿ ಮಾಡಿದ್ದೇನು? appeared first on News First Kannada.

Source: newsfirstlive.com

Source link