ಮಾಸ್​ ‘ಮದಗಜ’ನಿಗೆ ಗ್ರ್ಯಾಂಡ್​ ವೆಲ್ಕಮ್​; 900 ಸ್ಕ್ರೀನ್ಸ್​ ಮೇಲೆ ಹೇಗಿತ್ತು ರಥಾವರನ ಆರ್ಭಟ


ಕುತೂಹಲ ಕೆರಳಿಸುವ ಕಂಟೆಂಟ್​​ಗಳಿಂದ ನಿರೀಕ್ಷೆಯ ನಂದಿ ಬೆಟ್ಟವನ್ನೇ ತನ್ನ ಹೆಗಲ ಮೇಲೆ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬಂದಿರುವ ಸಿನಿಮಾ ಮದಗಜ. ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ಕಾತುರತೆಯಿಂದ ಕಾದಿದ್ದ ಮದಗಜ ಕೊನೆಗೂ ಥಿಯೇಟರ್ ಅಂಗಳವನ್ನ ಪ್ರವೇಶಿಸಿದೆ.. ಮದಗಜ ಚಿತ್ರಕ್ಕಾಗಿ ಕಾದಿದ್ದ ರೋರಿಂಗ್ ಸ್ಟಾರ್ ಫ್ಯಾನ್ಸ್ ಗ್ರ್ಯಾಂಡ್ ಆಗಿ ಸಿನಿಮಾವನ್ನ ವೆಲ್ ಕಮ್ ಮಾಡಿದ್ದಾರೆ.

ಮದಗಜ ಅನ್ನೋ ಟೈಟಲ್ ಇಟ್ಟಾಗಲೇ ಪ್ರೇಕ್ಷಕರು ನಿರೀಕ್ಷೆಯ ನೋಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮೇಲೆ ಬಿದ್ದಿತ್ತು.. ಉಗ್ರಂ , ರಥಾವರ , ಮಫ್ತಿಗಿಂತ ಇನ್ನೇನು ಮಾಡಬಹುದು ಶ್ರೀಮುರಳಿ ಎಂಬುವ ಕೂತುಹಲ ಎಲ್ಲರಲ್ಲಿತ್ತು.. ಪೊಸ್ಟರ್ , ಟೀಸರ್ , ಟ್ರೈಲರ್ , ಸಾಂಗ್ಸ್ ಹಾಗೂ ಮೇಕಿಂಗ್​ ಅನ್ನ ನೋಡಿದ ಚಿತ್ರಪ್ರೇಮಿಗಳಿಗೆ  ಓಹೋ ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನೋ ಅಂದಾಜು ಬಂದಿತ್ತು.. ಆ ಅಂದಾಜಿಗೆ ತಕ್ಕನಾಗಿ ಅಂದವಾಗಿಯೇ ಅದ್ಧೂರಿ ಅದ್ಭುತವಾಗಿಯೇ ಮದಗಜ ಸಿನಿಮಾ ಬೆಳ್ಳಿ ಸ್ಕ್ರೀನ್ ಮೇಲೆ ಅರಳಿದೆ.

700ರಿಂದ 900 ಸ್ಕ್ರೀನ್ಸ್​​​​ಗಳಲ್ಲಿ ‘ಮದಗಜ’ ಮೋಡಿ

ಫ್ಯಾನ್ಸ್​​​​​​​​​​​​​ಗಳಿಂದ ‘ಮದಗಜ’ನಿಗೆ ಸಂಭ್ರಮದ ಸ್ವಾಗತ

ಚಿತ್ರತಂಡದ ಮಾಹಿತಿಯ ಪ್ರಕಾರ 700ರಿಂದ 900ಕ್ಕೂ ಹೆಚ್ಚು ಸ್ಕ್ರೀನ್ಸ್​​ಗಳಲ್ಲಿ ರಾಜ್ಯಾದ್ಯಂತ ತೆರೆಕಂಡಿದೆ ಮದಗಜ ಸಿನಿಮಾ. ಎಲ್ಲಾ ಕಡೆ ಅದ್ದೂರಿಯಾಗಿಯೆ ಓಪನಿಂಗ್ ಸಿಕ್ಕಿದೆ.ಅದರಂತೆ ಬೆಂಗಳೂರಿನ ಗಾಂಧಿನಗರ ಅನುಪಮ ಥಿಯೇಟರ್​ನಲ್ಲೂ ಮದಗಜ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಅಭಿಮಾನಿಗಳ ಜೊತೆ ಸಂಪೂರ್ಣ ಚಿತ್ರತಂಡ ಸಿನಿಮಾವನ್ನ ನೋಡಿ ಎಂಜಾಯ್ ಮಾಡಿದೆ.

ಅನುಪಮ ಚಿತ್ರ ಮಂದಿರದ ಮುಂದೆ ಹಬ್ಬದಂತೆ ಸಿಂಗರಿಸಿ ರೋರಿಂಗ್ ಸ್ಟಾರ್ ಅಭಿಮಾನಿಗಳು ಮದಗಜ ಚಿತ್ರಕ್ಕೆ ಅದ್ಧೂರಿ ಸ್ವಾಗತ ನೀಡಿದ್ರು.. ಥಿಯೇಟರ್​​ ನ ಹೊರಗಡೆ ಫ್ಯಾನ್ಸ್​​ಗಳು ಸಂಭ್ರಮಿಸುತ್ತಿದ್ದರೆ ಥಿಯೇಟರ್​​​​ನ ಒಳಗಡೆ ಚಿತ್ರತಂಡದವರು ಮೊದಲ ಶೋ ಪ್ರಾರಂಭವಾಗೋ ಮುನ್ನ ಸ್ಕ್ರೀನ್​​ಗೆ ಪೂಜೆ ಮಾಡಿ ಒಳಿತಾಗಲಿ ಎಂದು ಬೇಡಿದ್ರು.

ಅಭಿಮಾನಿಗಳ ಜೊತೆ ಸಂಪೂರ್ಣ ಶ್ರೀಮುರಳಿ ಅವರ ಕುಟುಂಬ ಸಿನಿಮಾ ನೋಡಿ ಸಂತೋಷ ಪಟ್ತು. ಸಿನಿಮಾದೊಳಗಿನ ಪ್ರತಿ ಆ್ಯಕ್ಷನ್​​ಗಳನ್ನ ಕಾಣುತ್ತಿದ್ದ ಅಭಿಮಾನಿಗಳ ಪ್ರತಿ ರಿಯಾಕ್ಷನ್​​ಗೂ ಶ್ರೀಮುರಳಿ ಆಂಡ್ ಚಿತ್ರತಂಡ ಪುಳಕಿತರಾಗುತ್ತಿತ್ತು..

ರೋರಿಂಗ್ ಫ್ಯಾನ್ಸ್​​​​ ಕಡೆಯಿಂದ ಬೃಹತ್ ಸೇಬಿನ ಹಾರ

ಅಭಿಮಾನಿಗಳ ಜೊತೆ ಸಂಭ್ರಮಿಸಿದ ರೋರಿಂಗ್ ಸ್ಟಾರ್

ಶ್ರೀಮುರಳಿ ಫ್ಯಾನ್ಸ್ ಬೃಹತ್ ಸೇಬು ಹಣ್ಣಿನ ಹಾರನ್ನ ಶ್ರೀಮುರಳಿ ಅವರಿಗೆ ಮತ್ತು ಮದಗಜ ಫಿಲ್ಮ್ ಟೀಮ್​​​ಗೆ ಹಾಕಿ ಸಂತೋಷ ಪಡ್ತು. ಇತ್ತ ಅಭಿಮಾನಿಗಳ ಜೊತೆ ಮಾತನಾಡಿ ಸೆಲ್ಫಿಗೆ ಪೋಸ್ ಕೊಟ್ಟು ಶ್ರೀ ಮುರಳಿ ದಿಲ್ ಖುಷ್ ಆದ್ರು.ಒಟ್ಟಿನಲ್ಲಿ ಶ್ರೀಮುರಳಿ ಅಭಿನಯದ 21ನೇ ಸಿನಿಮಾ ಮದಗಜ ಚಿತ್ರದ ಅನುಪಮ ಥಿಯೇಟರ್ ಮುಂಭಾಗ ಸಂತೋಷ ಸಡಗರದ ಹಬ್ಬದಂತೆ ಅಭಿಮಾನದ ಉತ್ಸವದಂತೆ ನೇರವೇರಿತು.

The post ಮಾಸ್​ ‘ಮದಗಜ’ನಿಗೆ ಗ್ರ್ಯಾಂಡ್​ ವೆಲ್ಕಮ್​; 900 ಸ್ಕ್ರೀನ್ಸ್​ ಮೇಲೆ ಹೇಗಿತ್ತು ರಥಾವರನ ಆರ್ಭಟ appeared first on News First Kannada.

News First Live Kannada


Leave a Reply

Your email address will not be published. Required fields are marked *