ಮಾಸ್​ ಲುಕ್​ನಲ್ಲಿ ಬಂದ ರಜನಿಕಾಂತ್; 169ನೇ ಚಿತ್ರದಲ್ಲಿ ಸೂಪರ್​ ಸ್ಟಾರ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ | Thalaivar 169 Movie announced Super star Rajinikanth in Mass look Anirudh Ravichander music


ಮಾಸ್​ ಲುಕ್​ನಲ್ಲಿ ಬಂದ ರಜನಿಕಾಂತ್; 169ನೇ ಚಿತ್ರದಲ್ಲಿ ಸೂಪರ್​ ಸ್ಟಾರ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ

ರಜನಿ ಹೊಸ ಸಿನಿಮಾ ಪೋಸ್ಟರ್​

ಇತ್ತೀಚೆಗೆ ತೆರೆಗೆ ಬಂದ ‘ಸೂಪರ್​ ಸ್ಟಾರ್​’ ರಜನಿಕಾಂತ್ (Rajanikanth) ​​ ನಟನೆಯ ‘ಅಣ್ಣಾಥೆ’ ಚಿತ್ರ (Annaatthe Movie) ಸೂಪರ್ ಹಿಟ್​ ಆಗಿತ್ತು. ಈಗ ರಜನಿಕಾಂತ್ ನಟನೆಯ 169ನೇ ಸಿನಿಮಾ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಅನೇಕ ವರದಿಗಳು ಪ್ರಕಟಗೊಂಡಿದ್ದವು. ಈಗ ಅದು ನಿಜವಾಗಿದೆ. ರಜನಿ ಮುಂದಿನ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ರಜನಿಕಾಂತ್​ ಅವರು ಮಾಸ್​ ಲುಕ್​ನಲ್ಲಿರುವ ಪೋಸ್ಟರ್​ ಸಖತ್​ ವೈರಲ್​ ಆಗುತ್ತಿದೆ. ಸ್ಮಗ್ಲಿಂಗ್​ ಕಥೆಯ ಸುತ್ತ ಸಿನಿಮಾದ ಕಥೆ ಸಾಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ನೆಲ್ಸನ್​ ದಿಲೀಪ್​ ಕುಮಾರ್ () ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಅನಿರುದ್ಧ ರವಿಚಂದರ್​ ಸಂಗೀತ ಚಿತ್ರಕ್ಕಿರಲಿದೆ.

ನೆಲ್ಸನ್​ ದಿಲೀಪ್​ ಕುಮಾರ್ ಅವರು ‘ಬೀಸ್ಟ್’ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ. ನೆಲ್ಸನ್​ ದಿಲೀಪ್​ ಅವರು ಈ ಮೊದಲು ‘ಡಾಕ್ಟರ್​​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅವರು ರಜನಿಕಾಂತ್​ ಜತೆ ಈಗ ಕೈಜೋಡಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ ‘ಥಲೈವರ್​ 169’ ಎಂದು ಕರೆಯಲಾಗುತ್ತಿದೆ.

ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೊದಲಿಗೆ ಅನಿರುದ್ಧ ಅವರನ್ನು ತೋರಿಸಿದರೆ ಆ ಬಳಿಕ ನೆಲ್ಸನ್​ ಅವರನ್ನು ತೋರಿಸಲಾಗಿದೆ. ರಜನಿಕಾಂತ್​ ಅವರು ಸ್ಟೈಲಿಶ್​ ಆಗಿ ಕನ್ನಡಕ ಧರಿಸಿ ಮಿಂಚಿದ್ದಾರೆ. ಇದು ವಿಶಿಷ್ಟವಾದ ಸಿನಿಮಾ ಆಗಿರಲಿದ್ದು, ಏಪ್ರಿಲ್ ಅಂತ್ಯ/ಮೇ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ. ಆ ನಂತರ ವೇಗವಾಗಿ ಶೂಟಿಂಗ್​ ಪೂರ್ಣಗೊಳಿಸಿ, ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿ ಚಿತ್ರ ತಂಡ ಇದೆ ಎಂದು ವರದಿ ಆಗಿದೆ.

ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಲಿದ್ದು, ಅನಿರುದ್ಧ್ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಮಾಡಲಿದ್ದಾರೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗುವ ಸಾಧ್ಯತೆ ಇದೆ.

TV9 Kannada


Leave a Reply

Your email address will not be published.